ಸುರಪುರ: ಕಳೆದ ೫ನೇ ತಾರೀಖು ಅಕಾಲಿಕವಾಗಿ ಸುರಿದ ಮಳೆಯಿಂದ ಯಾದಗಿರಿ ಭಾಗದಲ್ಲಿ ಅನೇಕ ರೈತರು ಸಂಕಷ್ಟಕ್ಕೆ ಈಡಾಗಿದ್ದು ಸರಕಾರ ರೈತರಿಗೆ ಪರಿಹಾರ ನೀಡುವಂತೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಯಾದಗಿರಿ ಸುತ್ತ ಮುತ್ತ ಸುರಿದ ಮಹಾಮಳೆಯಿಂದ ನೂರಾರು ಎಕರೆ ಭತ್ತ ನೆಲಕಚ್ಚಿದೆ ಅಲ್ಲದೆ ಕೃಷಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತಂದಿದ್ದ ರೈತರ ಶೇಂಗಾ ಮಳೆಯಲ್ಲಿ ನೆನೆದು ಹಾಳಾಗಿದೆ ಅಲ್ಲದೆ ನೀರಲ್ಲಿ ಕೊಚ್ಚಿಕೊಂಡು ಹೋಗಿದೆ.ಇದರಿಂದ ರೈತರು ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಿದ್ದಾರೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ಗಳ ಆರಂಭಿಸಿ: ಕ್ಯಾತಪ್ಪ ಮೇದಾ
ಆದ್ದರಿಂದ ಈಗಾಗಲೇ ತುಂಬಾ ಸಂಕಷ್ಟದಲ್ಲಿರುವ ರೈತರಿಗೆ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಆದ್ದರಿಂದ ಸರಕಾರ ಕೂಡಲೇ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಯಾದಗಿರಿ ಬಸ್ ನಿಲ್ದಾಣದ ಬಳಿಯಲ್ಲಿ ಗೋಡೆ ಕುಸಿದು ಅನಾಹುತಗೊಂಡು ಬೀದಿ ಬದಿಯ ವ್ಯಾಪಾರಿಗಳ ಹಣ್ಣು ತರಕಾರಿ ಹಾಳಾಗಿ ಸಣ್ಣ ಸಣ್ಣ ವ್ಯಾಪಾರಸ್ಥರು ನಷ್ಟ ಹೊಂದಿದ್ದಾರೆ ಮತ್ತು ಅನೇಕ ಬೈಕ್‌ಗಳು ಜಖಂಗೊಂಡಿವೆ ಈ ಎಲ್ಲರಿಗು ಜಿಲ್ಲಾಡಳಿತ ಪರಿಹಾರ ನೀಡುವಂತೆ ಅವರು ಮುಖ್ಯಮಂತ್ರಿ ಮತ್ತು ಕೃಷಿ ಸಚಿವರಿಗೆ ಆಗ್ರಹಿಸಿದ್ದಾರೆ.