ಶಹಾಬಾದ :ಆರನೇ ವೇತನ ಆಯೋಗದ ಅನುಸಾರ ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರ ರಾಜ್ಯ ವ್ಯಾಪ್ತಿ ಎರಡನೇ ದಿನದ ಮುಷ್ಕರದಿಂದ ತಾಲೂಕಿನಾದ್ಯಂತ ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಶಹಾಬಾದ ನಗರಸಭೆ ಬಜೆಟ್ ಮಂಡನೆ; 30.19 ಲಕ್ಷ ರೂ. ಉಳಿತಾಯ
ಬೆಳಿಗ್ಗೆಯಿಂದಲೇ ಇಂದಾದರೂ ಬಸ್ ಪ್ರಾಂಭವಾಗಿರಬಹುದು ಎಂದು ಎಂದುಕೊಂಡು ಜನರು ಬಸ್ ನಿಲ್ದಾಣಕ್ಕೆ ಬಂದರೆ ಬಸ್ ನಿಲ್ದಾಣದಲ್ಲಿ ಇರಲಿಲ್ಲ. ಖಾಸಗಿ ಬಸ್‌ಗಳಂತು ಇಲ್ಲವೇ ಇಲ್ಲ.ಗ್ರಾಮೀಣ ಭಾಗದಿಂದ ಶಹಾಬಾದ ನಗರಕ್ಕೆ ಬಂದು ಹೋಗುವ ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಯಿತು.ಹಲವಾರು ಜನರು ಟೆಂಪೋ, ಕ್ರೂಸರ್‌ಗಳನ್ನು ಆಸ್ರಯಿಸಿದರು.
ಖಾಸಗಿ ವಾಹನಗಳಲ್ಲಿ ಮಿತಿಮೀರಿದ ಪ್ರಯಾನಿಕರನ್ನು ತುಂಬುವುದು.ಹೆಚ್ಚುವರಿ ಪ್ರಯಾಣ ದರವನ್ನು ವಸೂಲಿಗೆ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಪ್ರಯಾಣಿಕರ ಶೋಷಣೆಯಾಗುತ್ತಿರುವುದು ಕಂಡುಬಂತು.ಮುಷ್ಕರದ ಮಾಹಿತಿ ಇಲ್ಲದೇ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಪರದಾಡಿದರು.ಕಲಬುರಗಿಯಿಂದ ಶಹಾಬಾದ ಹೊರವಲಯದ ಶಹಾಬಾದ-ವಾಡಿ ರಾಷ್ಟ್ರೀಯ ಹೆದ್ದಾರಿ ಕೂಡ ಖಾಲಿ ಖಾಲಿಯಾಗಿತ್ತು. ಯಾವತ್ತು ಜನಜಂಗುಳಿಯಿಂದ ತುಂಬಿರುವ ಭಂಕೂರ ವೃತ್ತ ಮಧ್ಯಾಹ್ನ ಬಿಕೋ ಎನ್ನುತ್ತಿರುವುದು ಕಂಡು ಬಂತು.