ಶಹಾಬಾದ ನಗರಸಭೆ ಬಜೆಟ್ ಮಂಡನೆ; 30.19 ಲಕ್ಷ ರೂ. ಉಳಿತಾಯ

1
127

ಕಲಬುರಗಿ: ಶಹಾಬಾದ ನಗರದ ನಗರಸಭೆಯಲ್ಲಿ  ಗುರುವಾರ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಸುಮಾರು ೩೦.೧೯ ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.

ನಗರಸಭೆಯ ೨೦೨೧-೨೨ನೇ ಸಾಲಿನ ಪ್ರಾರಂಭಿಕ ಶುಲ್ಕ ೬೭೬.೫೪ ಲಕ್ಷ ರೂ, ಅಂದಾಜು ಆದಾಯ ೨೨೫೮.೬೫ ಲಕ್ಷ ಸೇರಿದಂತೆ ಒಟ್ಟು ೨೯೩೫.೧೯ ಲಕ್ಷ ರೂ. ಗಳ ಬಜೆಟನಲ್ಲಿ ಅಂದಾಜು ವೆಚ್ಚ ೨೯೦೫.೦೦ ಲ್ಷ ರೂ.ಗಳಾಗಲಿದ್ದು, ಒಟ್ಟು ೩೦.೧೯ ಲಕ್ಷ ರೂ. ಉಳಿತಾಯ ಬಜೆಟ್‌ನ್ನು ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ ಮಂಡಿಸಿದರು.

Contact Your\'s Advertisement; 9902492681

ಸಭೆ ಪ್ರಾರಂಭವಾಗುತ್ತಿದ್ದಂತೆ  ನಗರಸಭೆಯ ಸಿಬ್ಬಂದಿಗಳು ಸದಸ್ಯರ ಮಾತಿಗೆ ಸ್ಪಂದಿಸುತ್ತಿಲ್ಲ.ಅಲ್ಲದೇ ನಮ್ಮ ವಾರ್ಡಗಳಲ್ಲಿನ ಸಮಸ್ಯೆ ಬಗೆಹರಿಸದಿರುವುದಕ್ಕೆ ಜನರಿಂದ ಉಗುಳಿಸಿಕೊಳ್ಳುವ ಪರಿಸ್ಥಿತಿ ಚುನಾಯಿತ ಪ್ರತಿನಿಧಿಗಳಿಗೆ ಬಂದೊದಗಿದೆ.ನಗರಸಭೆಯ ಸಿಬ್ಬಂದಿಗಳಿಂದ ಬೇಗನೆ ಕೆಲಸವಾಗುತ್ತಿಲ್ಲ. ನಮ್ಮ ಕೆಲಸಕ್ಕೆ ಇಷ್ಟೊಂದು ತೊಂದರೆಯಾಗುತ್ತಿದ್ದರೇ ಜನಸಾಮನ್ಯರ ಗತಿಯೇನು? ಇವರು ಬ್ರೋಕರ್‌ಗಳನ್ನು ಸಾಕಿದ್ದಾರೆ. ಬ್ರೋಕರ್‌ಗಳು ಬಂದರೆ ಕೆಲಸವಾಗುತ್ತಿದೆ. ನಗರಸಭೆಯ ಸಿಬ್ಬಂದಿಗಳ ಹತೋಟಿ ಕಾಪಾಡಲು ಆಗದಿದ್ದರೇ ರಾಜೀನಾಮೆ ನೀಡಿ ಎಂದು ಅಧ್ಯಕ್ಷ ಅಂಜಲಿ ಗಿರೀಶ ಕಂಬಾನೂರ ಹಾಗೂ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪನವರ ವಿರುದ್ಧ ನಗರ ಸಭೆ ಸದಸ್ಯ ರವಿ ರಾಠೋಡ್ ಆಕ್ರೋಶ ವ್ಯಕ್ತಪಡಿಸಿದರು.

ಭಾರಿ ವಾಹನಗಳ ವಿರುದ್ಧ ಕ್ರಮಕ್ಕೆ ಆಗ್ರಹ

ತಕ್ಷಣವೇ ಅಧ್ಯಕ್ಷೆ ಸಿಬ್ಬಂದಿಗಳನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡರಲ್ಲದೇ ನಗರಸಭೆಯ ಸದಸ್ಯರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ತಾಕೀತು ಮಾಡಿದರು.

ನಂತರ ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ, ನಗರಸಭೆಯ ಸದಸ್ಯರು ಫೋನ್ ಮಾಡಿ ವಾರ್ಡನ ಸಮಸ್ಯೆ ಹೇಳಿದರೇ ಅದಕ್ಕೆ ಸ್ಪಂದಿಸಿ, ಸಮಸ್ಯೆಯನ್ನು ಬಗೆಹರಿಸಬೇಕು.ಅದನ್ನು ಬಿಟ್ಟು ಎಲ್ಲದಕ್ಕೂ ಪೌರಾಯುಕ್ತರಿಗೆ, ನಗರಸಭೆಯ ಅಧ್ಯಕ್ಷರಿಗೆ ಹೇಳುವಂತೆ ಆಗಬಾರದೆಂದು ಹೇಳಿದರು.

ನಗರಸಭೆಯ ಸದಸ್ಯ ನಾಗರಾಜ ಕರಣಿಕ್ ಮಾತನಾಡಿ, ನನ್ನ ವಾರ್ಡನಲ್ಲಿ ಚರಂಡಿ ನಿರ್ಮಾಣಕ್ಕೆ ಹಾಗೂ ಚರಂಡಿ ಮೇಲಿನ ಸ್ಲ್ಯಾಬ್ ನಿರ್ಮಾಣಕ್ಕೆ ಸಾಕಷ್ಟು ಬಾರಿ ದೂರು ಸಲ್ಲಿಸಿ, ನಿರ್ಮಾಣಕ್ಕೆ ಮನವಿಯೂ ಸಲ್ಲಿಸಿದರೂ ಇಲ್ಲಿಯವರೆಗ ಕಾಮಗಾರಿ ಆಗಿಲ್ಲ.ಅಲ್ಲದೇ ಬಜೆಟ್‌ನಲ್ಲಿ ಉದ್ಯಾನವಕ್ಕೆ ಮತ್ತೆ ಅನುದಾನ ನೀಡಲಾಗಿದೆ.ಇದ್ದ ಉದ್ಯಾನವನ ಒತ್ತುವರಿಯಾಗಿವೆ.ಅದನ್ನು ತೆರವುಗೊಳಿಸುವ ಬದಲು ಅನುದಾನ ನೀಡುತ್ತಿದ್ದೀರಿ.ನಗರದಲ್ಲಿ ಎಷ್ಟು ಉದ್ಯಾನವನ ಒಂದಾದರೂ ಒಳ್ಳೆಯ ಸುಸ್ಥಿಯಲ್ಲಿವೆಯಾ ಎಂದು ನೋಡಿಕೊಳ್ಳಿ.ಅಲ್ಲದೇ ನಗರದ ಹನುಮಾನ ನಗರದ ಹಾಸ್ಟೆಲ್ ಮುಂಭಾಗದ ಕಂಪೌಂಡ ಚರಂಡಿ ನಿರ್ಮಾಣಕ್ಕೆ ೨ಲಕ್ಷ ಬದಲು ಸುಮಾರು ೧೧ ಲಕ್ಷ ಅನುದಾನ ಒದಗಿಸಲಾಗಿದೆ. ಅಧಿಕಾರಿಗಳು ಮನಸ್ಸಿಗೆ ಬಂದತೆ ಮಾಡುತ್ತಿದ್ದರೇ ಹೇಗೆ ಎಂದು ಪ್ರಶ್ನಿಸಿದರು.

ಬೋರ್‌ವೆಲ್ ದುರಸ್ಥಿಗೆ ಪಾಲಿಕೆ ಆಯುಕ್ತರಿಗೆ ಒತ್ತಾಯ

ಅಲ್ಲದೇ ನಗರಸಭೆಯ ವ್ಯಾಪ್ತಿಯ ವಾರ್ಡ ನಂ. ೧೧, ೧೨, ಹಾಗೂ ೧೩ ಗೆ ಹೋಗಲು ಯಾವುದೇ ಸಂಪರ್ಕ ರಸ್ತೆಯಿಲ್ಲದೇ ಸುಮಾರು ವರ್ಷಗಳಿಂದ ಇಲ್ಲಿನ ಜನರು ತೊಂದರೆ ಪಡುತ್ತಿದ್ದಾರೆ.ರೇಲ್ವೆ ಹಳಿಯನ್ನೇ ದಾಟುತ್ತ ಜೀವನ ಸಾಗಿಸುತ್ತಿದ್ದಾರೆ.ಹಲವಾರು ಬಾರಿ ಮನವಿ ಸಲ್ಲಿಸಬೇಕು.ಮತ್ತೆ ಸಭೆ ನಂತರ ಅದೇ ಚಾಳಿ ನಡೆಯುತ್ತಿದೆ.ಕೂಡಲೇ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು. ನಗರಸಭೆಯ ಸದಸ್ಯ ಮ.ಅಮ್ಜದ್ ಮಾತನಾಡಿ, ನಮ್ಮ ವಾರ್ಡನ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಹೇಳಿದರೂ ಕೆಲಸವಾಗುತ್ತಿಲ್ಲ.ಅದಕ್ಕಾಗಿ ಅಲ್ಲಿನ ಕಾಮಗಾರಿಗಳನ್ನು ನಮಗೆ ಮಾಡಲು ಅವಕಾಶ ಕೊಡಿ ಎಂದರು.ಅದಕ್ಕೆ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹಾಗೇ ಮಾಡಲು ಸಾಧ್ಯವಿಲ್ಲ.ಅದಕ್ಕೂ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಬೇಕಾಗುತ್ತದೆ.ಸರ್ಕಾರದ ನಿಯಮವನ್ನು ಪಾಲನೆ ಮಾಡಲೇಬೇಕಾಗುತ್ತದೆ ಎಂದು ಹೇಳಿದರು.ಅಲ್ಲದೇ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸಲು ಸದಸ್ಯರುಗಳು ಒತ್ತಾಯಿಸಿದರು.

ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ , ಕಚೇರಿ ವ್ಯವಸ್ಥಾಪಕ ಶಂಕರ ಇಂಜಗನೇರಿ, ಎಇಇ ಪುರುಷೋತ್ತಮ, ಪರಿಸರ ಎಇಇ ಮುಜಾಮಿಲ್ ಅಲಂ,ಎಇ ಶಾಂತರೆಡ್ಡಿ ದಂಡಗುಲಕರ್ ಜೆಇಗಳಾದ ಬಸವರಾಜ, ಮೌಲಾ ಅಲಿ, ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ, ಆರೋಗ್ಯ ನೀರಿಕ್ಷಕ ಶಿವರಾಜಕುಮಾರ, ರಾಜೇಶ, ಶರಣು, ಸೇರಿದಂತೆ ನಗರಸಭೆಯ ಸರ್ವ ಸದಸ್ಯರು ಮತ್ತು ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here