ಮಳೆಗಾಗಿ ಪ್ರಾರ್ಥನೆ ಮಾಡಿದರೆ ಭಗವಂತನ ಕಾರಣ್ಯ ಸಾಧ್ಯ: ಶ್ರೀನಿವಾಸ ಶ್ರೀ

0
39

ಯಾದಗಿರಿ: ಮಳೆ ಬಾರದೇ ಇರುವುದರಿಂದ ಜೀವರಾಶಿಗಳು ತತ್ತರಿಸಿ ಹೋಗಿದ್ದು ಕುಡಿಯುವ ನೀರು ಸಿಗದಂತಾಗಿದ್ದು ರೈತನ ಮುಖ ಕಳೆಗುಂದಿದ್ದು ಇಂತಹ ಸಂದಿಗ್ದ ಮಯದಲ್ಲಿ ಶ್ರದ್ಧಾ ಭಕ್ತಿ ಭಾವದಿಂದ ಮಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸುವುದರಿಂದ ಆತನ ಕರುಣೆಯಿಂದ ಎಲ್ಲೆಡೆ ಮಳೆಯಾಗಲು ಸಾಧ್ಯವೆಂದು ವಿಶ್ವಕರ್ಮ ಏಕದಂಡಗಿಮಠದ ಶ್ರೀ ಶ್ರೀನಿವಾಸ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗುರುವಾರ ನಗರದ ಗಂಜ್ ಏರಿಯಾದಲ್ಲಿರುವ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಹಮ್ಮಿಕೊಂಡ ಪ್ರಾರ್ಥನಾ ಸಭೆಯಲ್ಲಿ ಆಶೀರ್ವಚನ ನೀಡಿ ನಿಸ್ವಾರ್ಥ ಭಾವನೆಯಿಂದ ಜನಕಲ್ಯಾಣದ ಬೇಡಿಕೆ ಭಗವಂತ ಬೇಗನೆ ಈಡೇರಿಸಬಲ್ಲ ಎಂದರು.

Contact Your\'s Advertisement; 9902492681

ಶ್ರೀ ಮೌನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಹೆಂದೆ, ಅಯ್ಯಣ್ಣ ಹುಂಡೇಕಾರ್, ಸಿಎಂ ಪಟ್ಟೇದಾರ, ಸಿದ್ದಪ್ಪ ಹೊಟ್ಟಿ, ಮೌಲಾಲಿ ಅನಪೂರ, ಚಂದಣ್ಣ ಹಾಲಬಾವಿ, ಸದಾಶಿವಪ್ಪ ಚಂಡರಕಿ, ಸುಭಾಷ ಆಯರಕರ್, ವಿರಭದ್ರಯ್ಯ ಸ್ವಾಮಿ, ಬಸವಂತರಾಯ ಮಾಲಿಪಾಟೀಲ್, ನಾಗೆಂದ್ರ ಜಾಜಿ, ಶರಣಪ್ಪ ಗುಳಗಿ, ಶರಣಗೌಡ ಅರಕೇರಿ, ಮಹೇಶ್ಚಂದ್ರ ವಾಲಿ, ಲಿಂಗಣ್ಣ ಸಾಹು ಖಾನಾಪೂರ, ಡಾ. ಮಲ್ಲೇಶಪ್ಪ ಅರಕೇರಿ, ಗಂಗಣ್ಣ ಸಜ್ಜನ, ನೂರೊಂದಪ್ಪ ಲೇವಡಿ, ಮಲ್ಲಯ್ಯ ಪೂಜಾರಿ ರಮೇಶ ಪಾಸಮೇಲ, ಶೇಖರ ಅರಳಿ, ಗುರುಸಿದ್ದಪ್ಪ ಗುಂಡಳ್ಳಿ, ಜಗದೀಶ ಚಿಂಳ್ಳಂಚಿ, ಮೂರ್ತಿ ಅನಪೂರ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು. ವಿಶೇಷವೆಂದರೆ ಪ್ರಾರ್ಥನೆ ಸಲ್ಲಿಸಿದ ದಿನದಂದು ರಾತ್ರಿ ಮಳೆ ಸುರಿದಿರುವುದು ಭಕ್ತಿಯ ಅಭಿಮಾನ ಮೂಡಿಸಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಹೆಂದೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here