ಅನ್ವೇಷಣೆಯ ಕಲಿಕೆ ವಿದ್ಯಾರ್ಥಿಗಳಿಗೆ ಪೂರಕ: ಡಾ.ವಿ.ಡಿ ಮೈತ್ರಿ

0
48

ಕಲಬುರಗಿ: ಹೊಸ ಹೊಸ ಅಪ್ಲಿಕೇಶನ್ ಮತ್ತು ಪ್ರೊಗ್ರಾಂಗಳನ್ನು ಕಲಿಯುವುದರಿಂದ ಕೌಶಲ್ಯದ ಬೆಳವಣಿಗೆಯಾಗುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಸಮ ಕುಲಪತಿ ಡಾ.ವಿ.ಡಿ ಮೈತ್ರಿ ಅಭಿಪ್ರಾಯಪಟ್ಟರು.

ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಹಾಗೂ ಬೆಂಗಳೂರಿನ ಸಿಕ್ಸ್ಥ್ ಸಲ್ಯುಶನ್ಸ್ ಜಂಟಿಯಾಗಿ ಒಂದು ವಾರ ಹಮ್ಮಿಕೊಂಡಿದ್ದ  ಅಪ್ಲಿಕೇಶನ್ಸ್ ಆಫ್ ಲ್ಯಾಬ್‌ವಿವ್ ಇನ್ ಟಿಚಿಂಗ್ & ರಿಸರ್ಚ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿದ್ದೂ ಬೇರೆ ಬೇರೆ ಅಪ್ಲಿಕೇಶನ, ಪ್ರೊಗ್ರಾಂಗಳನ್ನು ಇದರ ಮೂಲಕ ಕಲಿಯಬಹುದು. ನಿರಂತರ ಕಲಿಕೆಯಿಂದ ಕೌಶಲ್ಯ ಪ್ರಾಪ್ತಿಯಾಗುತ್ತದೆ ಇದರ ಮೂಲಕ ಕಂಡು ಬರುವ ಹೊಸ ಅಂಶಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ಕುಲಸಚಿವ ಡಾ. ಅನಿಲಕುಮಾರ ಬಿಡವೆ ಮಾತನಾಡಿ, ಕಾರ್ಯಗಾರದಲ್ಲಿ ಭಾಗವಹಿಸಿದ ಬೋಧಕರು ಪರಿಣಾಮಕಾರಿಯಾಗಿ ಇಲ್ಲಿ ಕಲಿತ ವಿಷಯವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ವಸಂತಕುಮಾರ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಡೀನ್ ಡಾ. ಲಕ್ಷ್ಮೀ ಪಾಟೀಲ, ಡಾ. ಶಿವುಕುಮಾರ ಜವಳಗಿ, ಡಾ. ಬಸವರಾಜ ಮಠಪತಿ, ಡಾ. ಎಂ ಶಶಿಕಲಾ, ಡಾ. ಸಿದ್ದಾರಾಮ ಪಾಟೀಲ, ಡಾ. ಕಿರಣ ಮಾಕಾ, ಡಾ. ರಾಜು ಯೆಣಂಶೆಟ್ಟಿ, ಡಾ. ಜಿ ಎಸ್ ಬಿರಾದಾರ, ಪ್ರೊ. ಎಂ ಎನ್ ಮರೂಫ್, ಪ್ರೊ. ಶರಣಬಸಪ್ಪ ಮಡಿವಾಳ, ಪ್ರೊ. ಶಿವುಕುಮಾರ ರಾಚೋಟಿ, ಪ್ರೊ. ರಾಜಶೇಖರ ಯರಗೋಳ, ಪ್ರೊ. ಜಗದೀಶ ಪಾಟೀಲ, ಡಾ. ಸುಜಾತಾ ಮಲ್ಲಾಪುರೆ, ಪ್ರೊ. ಶಿವಲೀಲಾ ಪಾಟೀಲ, ಪ್ರೊ. ಶೀತಲ ಬಿರಾದಾರ, ಪ್ರೊ. ಸುಷ್ಮಾ ಪಾಟೀಲ, ಪ್ರೊ. ಅನುರಾಧಾ ಸವದಿ, ಪ್ರೊ. ಶಶಿಧರ ಸೊನ್ನದ, ಪ್ರೊ. ಆಶಾರಾಣಿ ಪಾಟೀಲ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪ್ರೊ. ಶೋಭನಾ ಪ್ರಾರ್ಥಿಸಿ, ನಿರೂಪಿಸಿದರು. ಪ್ರೊ. ಲಕ್ಷ್ಮೀ ಪಾಟೀಲ ಸ್ವಾಗತಿಸಿದರು. ಪ್ರೊ. ನಾಗವೇಣಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here