ಕಲಬುರಗಿ: 21 ರಂದು ವಕೀಲರ ಸಂಘದ ಚುನಾವಣೆ ಹಮ್ಮಿಕೊಂಡ ಪ್ರಯುಕ್ತ, ಇಂದು ನಾಮಪತ್ರ ಸಲ್ಲಿಸಲು ಕೊನೆ ದಿನ ವಾದ ಕಾರಣ, ಅಭ್ಯರ್ಥಿ ಜೊತೆ ಕೇವಲ ನಾಲ್ಕು ಜನರಿಗೆ ಮಾತ್ರ ಅವಕಾಶ ಕಲ್ಪಿಸಿ ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯದರ್ಶಿ ಹುದ್ದೆಗೆ ಜೇನವೆರಿ ವಿನೋದ ಕುಮಾರ.ಎಸ್. ನಾಮಪತ್ರ ಸಲ್ಲಿಸಿದರು.
ಹಿರಿಯ ವಕೀಲರಾದ ಹಣಮಂತ ರಾವ್ ಬಿರಾದಾರ ಬಿಲಗುಂದಿ, ತಿಪ್ಪಣ್ಣ ಪೂಜಾರಿ, ಜಿಲ್ಲಾ ಕುರುಬ ಸಂಘದ ಕಾರ್ಯದರ್ಶಿ ನಾಗೇಂದ್ರಪ್ಪ ಪೂಜಾರಿ ಇದ್ದರು.
ಇದೆ ಸಂದರ್ಭದಲ್ಲಿ ( K. Y. F ) ಸಂಘಟನೆಯ ರಾಜ್ಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಜೇ. ವಿನೋದ ಕುಮಾರರಿಗೆ ಕರ್ನಾಟಕ ಯುವಜನ ಒಕ್ಕೂಟದ ಗೌರವಾಧ್ಯಕ್ಷ ಭೀಮರಾವ ಜೀರಗಿ, ಜಿಲ್ಲಾ ಅಧ್ಯಕ್ಷ ಅನಂತ್ ಗುಡಿ, ಕಾರ್ಯದರ್ಶಿ ಜಗನ್ನಾಥ ಮಂಠಾಳೇ ಇತರರು ಚುನಾವಣಾ ಕಚೇರಿಗೆ ಆಗಮಿಸಿ ಶುಭ ಕೋರಿದರು.