ಕಲಬುರಗಿ: ಅಲ್ಪಸಂಖ್ಯಾತರ ಪತ್ರಿಕೋದ್ಯಮ ಹಾಗೂ ಪತ್ರಕರ್ತರಿಗೆ ಸರಕಾರ ಯಾವುದೇ ಯೋಜನೆ ನೀಡದಿರುರವುದು ಸರಕಾರ ನಡೆ ಖಂಡನೀವಾಗಿದೆ ಎಂದು ಪತ್ರಕರ್ತ ಸಾಜಿದ್ ಅಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಸರ್ಕಾರಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಾಗೂ ಪತ್ರಕರ್ತರಿಗೆ ಇನ್ಸೆನ್ ಟ್ಯೂವ್, ಪತ್ರಿಕೋದ್ಯಮ ಮತ್ತು ಸಂವಹನ ತರಬೇತಿ ಪಡೆಯಲು ಪ್ರೋತ್ಸಾಹಧನ, ಮಾಧ್ಯಮ ಕೀಟ್ ಹಾಗೂ ಗೌರವಧನ ನೀಡುವಂತಹ ಹಲವು ಯೋಜನೆಗಳು ಜಾರಿಲಿದ್ದವು ಇದೀಗ ಒಮ್ಮಿಂದೊಮ್ಮೆ ಕಡಿತಗೊಳಿಸಿರುವುದು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೊಡ್ಡ ಹೊಡೆತವಾಗಿದೆ ಎಂದು ಆರೋಪಿಸಿದ್ದಾರೆ.
ಸರಕಾರ ವಿದ್ಯಾರ್ಥಿಗಳಿಗಾಗಿ ಅನುಕೂಲಕ್ಕಾಗಿ ಯೋಜನೆಗಳು ರೂಪಿಸುವ ಬದಲು ಇರುವ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ವಿದ್ಯಾರ್ಥಿಗಳ ವಿರೋಧಿ ಸರಕಾರ ಎಂಬ ಅನುಮಾನ ಸೃಷ್ಟಿಸಿದೆ, ಈ ಕೂಡಲೇ ಎಚ್ಚೆತ್ತು ವಿವಿಧ ಯೋಜನೆಗಳನ್ನು ಜರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ತಕ್ಷಣ ರಾಜ್ಯ ಸರಕಾರ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರು ಪತ್ರಿಕೋದ್ಯಮ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿ ತಡೆಹಿಡಿದಿರುವ ಯೋಜನೆಗಳನ್ನು ಜಾರಿಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು ಪತ್ರಕರ್ತ ದಸ್ತಗೀರ ನದಾಫ್, ಪತ್ರಕರ್ತರ ಹಾಗೂ ವಿದ್ಯಾರ್ಥಿಗಳ ಪರ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಮನವಿ ಮಾಡಿದ್ದಾರೆ.