ಕಲಬುರಗಿ: ಕಾರಿನಲ್ಲಿಟ್ಟಿದ್ದ ಐದು ಲಕ್ಷ ರೂ. ಕದ್ದು ಪರಾರಿಯಾದ ಘಟನೆ ನಿನ್ನೆ (ಗುರುವಾರ) ಮಧ್ಯಾಹ್ನ 1.45ರ ಸುಮಾರಿಗೆ ನಡೆದಿದೆ.
ಜೇವರ್ಗಿ ತಾಲ್ಲೂಕಿನ ಗೌನಳ್ಳಿ ಗ್ರಾಮದ ಪ್ರವೀಣಕುಮಾರ ಬಿ. ಗೌನಳ್ಳಿ ಇಲ್ಲಿನ ಮಿನಿ ವಿಧಾನಸೌಧದ ಎದುರಿಗಿರುವ new generation ಬಟ್ಟೆ ಅಂಗಡಿಯ ಎದುರಿಗೆ ಕಾರ್ ನಿಲ್ಲಿಸಿ ಮೆಲ್ಗಡೆ ಇರುವ ಬಸವ ಭವನಕ್ಕೆ ಊಟಕ್ಕೆ ತೆರಳಿದಾಗ ಕಾರಿನಲ್ಲಿದ್ದ ಹಣವನ್ನು ಎಗರಿಸಿದ ಕಿಲಾಡಿಗಳು ಪರಾರಿಯಾಗಿದ್ದಾರೆ.
ಎರಡು ಬೈಕ್ ಗಳ ಮೇಲೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ನಾಲ್ವರು ದರೋಡೆಕೋರರು ಕಾರಿನ ಮುಂಭಾಗದ ಸೈಡ್ ಗ್ಲಾಸಿಗೆ ಯಾವುದೋ ದ್ರಾವಣ ಸಿಂಪಡಿಸಿ ಕಾರೊಳಗಿನ ಡ್ರಾ ದಲ್ಲಿ ಇಟ್ಟಿದ್ದ ₹ 5,00000 ನಗದು ಲೂಟಿ ಮಾಡಿ ಮತ್ತೆ ಬೈಕ್ ಮೇಲೆ ತೆರಳಿರುವುದು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಗೌನಳ್ಳಿಯ ಪ್ರವೀಣ ಹಾಗೂ ಅತನ ಗೆಳೆಯ ಇಬ್ಬರೂ ಸೇರಿ ಎಚ್.ಡಿ.ಎಫ್.ಸಿ. ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿಕೊಂಡಿರುವುದನ್ನು ಫಾಲೋ ಮಾಡಿದ ಕಳ್ಳರು ಅವರೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಹಿಂದೆ ಬಿದ್ದಿದ್ದಾರೆ.
ಕೊನೆಗೆ ಇಲ್ಲಿ ಬಂದು ಕಾರ್ ನಿಲ್ಲಿಸಿ ಊಟಕ್ಕೆ ತೆರಳಿದಾಗ ಈ ಕುಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು.