ಪರಿಷತ್ ಚುನಾವಣೆ ರಾಜ್ಯಾಧ್ಯಕ್ಷಸ್ಥಾನಕ್ಕೆ ಆಯ್ಕೆ ಮಾಡಲು ಶೇಖರಗೌಡ ಮಾಲಿಪಾಟೀಲ ಮನವಿ

0
196

ಶಹಾಬಾದ : ಮೇ.೯ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸಲಿದ್ದು, ನನ್ನನ್ನು ಗೆಲ್ಲಿಸಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಸ್ಪರ್ಧಿ ಶೇಖರಗೌಡ ಮಾಲಿಪಾಟೀಲ ಹೇಳಿದರು.

ಅವರು ಬುಧವಾರ ನಗರಕ್ಕ ಬೇಟಿ ನೀಡಿ, ನಗರದ ಶಹಾಬಾದ ಪತ್ತಿನ ಸಹಕಾರ ಸಂಘದಲ್ಲಿ ಕಸಾಪ ಸದಸ್ಯರೊಂದಿಗೆ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಕನ್ನಡ ನಾಡುನುಡಿಗಾಗಿ ಹೆಚ್ಚು ಕೆಲಸಗಳು ಇಲ್ಲಿ ನಡೆದಿವೆ. ಸುಮಾರು ೨೫ ಅಧ್ಯಕ್ಷರು ಕೆಲಸ ಮಾಡಿದ್ದಾರೆ. ೩ ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಇನ್ನು ಹತ್ತಾರು ಮಹತ್ವದ ಕೆಲಸಗಳು ಆಗಬೇಕಾಗಿದೆ. ಈ ಹಿನ್ನಲೆಯಲ್ಲಿ ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಸಮಸ್ತ ಕನ್ನಡಿಗರ ಆಶಯಗಳನ್ನು ನನಸಾಗಿಸಲು ಅಜೀವ ಸದಸ್ಯರಾದ ತಾವು ತಮ್ಮ ಅಮೂಲ್ಯ ಮತಗಳನ್ನು ನೀಡಿ ನನ್ನನ್ನು ಗೆಲ್ಲಿಸಬೇಕು ಎಂದರು.

Contact Your\'s Advertisement; 9902492681

ತಾವು ಗೆದ್ದರೆ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವೆ ಕನ್ನಡ ಶಾಲೆಗಳ ಸ್ಥಾಪನೆ ಮತ್ತು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿ?ತ್ತು ಮಾದರಿ ಕನ್ನಡ ಶಾಲೆ ಸ್ಥಾಪನೆ ಮಾಡುವ ಉದ್ದೇಶವಿದೆ. ರಾಜ್ಯದ ೪ ಕಂದಾಯ ವಿಭಾಗಗಳಲ್ಲಿ ಸಾಂಸ್ಕೃತಿಕ ಸಮಾವೇಶ ಆಯೋಜನೆ. ಯುವ ಬರಹಗಾರರ ಕಮ್ಮಟ, ಪುಸ್ತಕ ಸಂತೆ, ಮನೆ ಮನೆಗೆ ಪುಸ್ತಕ, ದಾಸಸಾಹಿತ್ಯ ಪ್ರಚಾರ, ದಲಿತ ಮಕ್ಕಳ ನಾಟಕ ಸಾಹಿತ್ಯಕ್ಕೆ ಒತ್ತು ಮತ್ತು ವಿಶೇ?ವಾಗಿ ಪ್ರೌಢಶಾಲೆಯಿಂದ ಸ್ನಾತಕೋತ್ತರ ವಿದ್ಯಾರ್ಥಿ ಗಳಿಗೆ ಹಳೆಗನ್ನಡದ ಓದು ಮತ್ತು ಆಧುನಿಕ ಸಾಹಿತ್ಯದ ಮರು ಓದು ಕುರಿತು ವಿಶೇ? ಯೋಜನೆಗಳನ್ನು ರೂಪಿಸಿದೆ ಎಂದರು.

ಕನ್ನಡ ಚಳವಳಿ, ರೈತ ಚಳುವಳಿ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮಗಳ ಕನ್ನಡ ಸಂಘಗಳ ಸಮಾವೇಶ ಹಮ್ಮಿಕೊಳ್ಳಲಾಗುವುದು. ವಿಶೇ?ವಾಗಿ ಪರಿ?ತ್ತಿನ ನಿಬಂಧನೆ ೩೮-ಎ ಮೂಲಕ ಸ್ಥಾಯಿನಿಧಿ ಸ್ಥಾಪನೆ ಮಾಡುವುದು ನನ್ನ ಉದ್ದೇಶವಾಗಿದೆ. ಪರಿ?ತ್ತಿನ ಪುಸ್ತಕಗಳನ್ನು ಆನ್‌ಲೈನ್ ಮಾರಾಟದ ಮೂಲಕ ವ್ಯವಸ್ಥೆ ಮಾಡುವ ಗುರಿಕೂಡ ಹೊಂದಿದ್ದೇನೆ. ಈಗಾಗಲೇ ಕೊಪ್ಪಳ ಜಿಲ್ಲೆಯ ಕಸಾಪ ಜಿಲ್ಲಾಧ್ಯಕ್ಷನಾಗಿ ೨ ಬಾರಿ ಕೆಲಸ ಮಾಡಿದ್ದೇನೆ. ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಸಾಹಿತ್ಯದಲ್ಲಿ ಮತ್ತ? ಕೆಲಸ ಮಾಡಬೇಕೆಂಬ ಉದ್ದೇಶ ಹೊಂದಿರುವೆ. ಪ್ರೌಢಶಾಲೆಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಳೆಗನ್ನಡ ಹಾಗೂ ಆಧುನಿಕ ಸಾಹಿತ್ಯದ ಮರು ಓದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಮೇ ೯ರಂದು ನಡೆಯುವ ಕಸಾಪ ಚುನಾವಣೆಯಲ್ಲಿ ತಮಗೆ ಮತಹಾಕಿ ಗೆಲ್ಲಿಸುವ ಮೂಲಕ ಕನ್ನಡ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಶಹಾಬಾದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣು ವಸ್ತ್ರದ್ ಮಾತನಾಡಿ, ಕಲ್ಯಾಣ ಕರ್ನಾಟಕದವರು ರಾಜ್ಯಾಧ್ಯಕ್ಷರಾಗಬೇಕೆಂಬ ಅಭಿಲಾಷೆ ನಮಗಿದೆ.ಆದ್ದರಿಂದ ನಾವೆಲ್ಲರೂ ತಮಗೆ ಬೆಂಬಲಿಸುತ್ತೆವೆ ಎಂದು ಹೇಳಿದರು.

ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಲೋಹಿತ್ ಕಟ್ಟಿ,ನಿಂಗಣ್ಣ ಹುಳಗೋಳಕರ್, ನಿಂಗಣ್ಣ ಸಂಗಾವಿಕರ್, ಬಸವರಾಜ ಮದ್ರಿಕಿ, ನಾಗಣ್ಣ ರಾಂಪೂರೆ, ಡಾ.ಅಹ್ಮದ್ ಪಟೇಲ್, ಶರಣು ತುಂಗಳ, ಶಿವಾನಂದ ಪಾಟೀಲ, ಜಗದೀಶ ಪಾಟೀಲ,ಶರಣು ಜೋಗೂರ, ಶ್ರೀಧರ ಜೋಷಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here