ಚಿತ್ತಾಪುರ: ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶರಣು ಮೋದಿ ಅವರಿಗೆ ಕರೋನಾ ಸೋಂಕು ದೃಢಪಟ್ಟಿದ್ದು.ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇಗ ಗುಣಮುಖರಾಗಲೆಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಕಾರ್ಯದರ್ಶಿಯಾದ ಜಗದೇವ ದಿಗ್ಗಾಂವಕರ್ ಅವರು ಪ್ರಾರ್ಥಿಸಿದ್ದಾರೆ.
ನಾನು ಆರೋಗ್ಯವಾಗಿದ್ದನೇ ಯಾರು ಆತಂಕ ಪಡಬೇಕಾಗಿಲ್ಲ, ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಕರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮೋದಿ ಅವರು ಸಲಹೆ ನೀಡಿದ್ದಾರೆ.