ಕಲಬುರಗಿ: ಈ ಭಾಗದ ಹಿರಿಯ ಸಾಹಿತಿಗಳನ್ನು ಕಳೆದುಕೊಂಡು ಕಲ್ಯಾಣ ಕರ್ನಾಟಕ ಬರಡಾಗಿದೆ ಎಂದು ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಶಿವಪ್ಪಾ ಕಟ್ಟಿಮನಿ ಸುಲ್ತಾನಪೂರ ಹೇಳಿದರು.
ಇಂದು ಸ್ನೇಹ ಸಂಗಮ ವಿವಿಧೊದ್ದೇಶ ಸೇವಾ ಸಂಘದ ವತಿಯಿಂದ ಕೆ.ಹೆಚ್.ಬಿ. ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಇತ್ತಿಚಿಗೆ ನಮ್ಮನ್ನಗಲಿದ ಹಿರಿಯ ಸಾಹಿತಿಗಳಾದ ಎಲ್.ಬಿ.ಕೆ. ಅಲ್ದಾಳ ಹಾಗೂ ಹೇಮಂತ ಕೋಲ್ಹಾಪೂರ ಅವರಿಗೆ ನುಡಿನಮನ ಅರ್ಪಿಸಿ ಮಾತನಾಡುತ್ತಾ ಹಿಂದುಳಿದ ಭಾಗದಲ್ಲಿನ ಅಪಾರ ಜ್ಞಾನ ಹೊಂದಿರುವ ಇರ್ವರು ರತ್ನಗಳನ್ನು ಕಳೆದುಕೊಂಡಿದ್ದೇವೆ. ಇವರು ಸಾಹಿತ್ಯ, ಕಲೆ, ನಾಟಕ, ಚುಟುಕು ಸಾಹಿತ್ಯಗಳನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಉತ್ತಮ ರೀತಿಯ ಸಮಾಜ ನಿರ್ಮಿಸೋಣ ಎಂದು ಹೇಳಿದರು.
ಸಂಘದ ಅಧ್ಯಕ್ಷ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಜಾತಿ, ಮತ, ಪಂಥ ಮೀರಿ ಬೆಳೆದ ಮಹಾನ ಸಾಹಿತಿಗಳು. ಇಬ್ಬರು ಸಾಹಿತಿಗಳ ಆಲೋಚನೆ ಒಳ್ಳೆಯ ಸಮಾಜ ನಿರ್ಮಿಸಬೇಕೆಂಬುದೆ ಆಗಿತ್ತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಸಯ್ಯ ಮಠಪತಿ, ವಿಜಯಕುಮಾರ ಪಾಟೀಲ, ರಾಜು ಚಿತ್ತಾಪೂರ, ಶರಣು ಕಟ್ಟಿಮನಿ, ಶಿವಕುಮಾರ ಬಿರಾದಾರ, ನಿರ್ಮಲಾ ಕಟ್ಟಿಮನಿ, ವಿಠಾಬಾಯಿ ಅಟ್ಟೂರ, ಮಲ್ಲಮ್ಮ ಕಟ್ಟಿಮನಿ, ಪ್ರೇಮಾ ಗಡಾದ, ಸಂದೇಶ ಕಟ್ಟಿಮನಿ, ಸಾಯಬಣ್ಣ ಜಂಬಗಿ, ವಿಜಯಲಕ್ಷ್ಮೀ ಹಿರೇಮಠ ಇತರರು ಭಾಗವಹಿಸಿದ್ದರು.