ಕಲಬುರಗಿ: ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಸಿವಿಲ್ ಇಂಜಿನಿಯರ್ ಮುರಳೀಧರ ಜಿ. ಕರಲಗಿಕರ್ ಅವರನ್ನು ‘ಶ್ರೀರಂಗ ಕನ್‌ಸ್ಟ್ರಕ್ಷನ್ಸ್’ ಕಂಪನಿಯ ನೌಕರರು, ಕಾರ್ಮಿಕರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕೊರೊನಾ ಹಿನ್ನೆಲೆಯಲ್ಲಿ ನಗರದ ಪೂರ್ಣಾನಂದ ಹೊಟೇಲ್‌ನ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಂಪನಿಯ ನೌಕರರು ಕರಲಗಿಕರ್ ಅವರಿಗೆ ಶಾಲು ಹೊದಿಸಿ ಬೃಹತ್ ಹೂಮಾಲೆ ಅರ್ಪಿಸಿ ಸನ್ಮಾನಿಸಿದರು.
ಕೋವಿಡ್ ನಿರ್ವಹಣೆಗಾಗಿ ರಾಜ್ಯಪಾಲ ವಾಜುಭಾಯಿ ವಾಲಾ ತುರ್ತು ಸಭೆ
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಾಜೇಂದ್ರ ಕರೇಕಲ್, ಚಂದ್ರಶೇಖರ ಹರಸೂರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಮುಂಬಯಿಯ ಕೇಂದ್ರ ರೈಲ್ವೆ ವಲಯ ಬಳಕೆದಾರರ ಸಮಿತಿ (ಝಡ್‌ಆರ್‌ಯುಸಿಸಿ) ಸದಸ್ಯ ವಿಜಯಕುಮಾರ ಹಳಕಟ್ಟಿ, ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರರ ಸಂಘದ ಕಾರ್ಯದರ್ಶಿ ಅನಿಲಕುಮಾರ ಗಂಗಾಣೆ, ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ್ ಕಾಳಗಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರಾಜೇಂದ್ರ ಕರೇಕಲ್ ಮಾತನಾಡಿ, ‘ಮುರಳಿಧರ ಅವರು ವೃತ್ತಿಯಿಂದ ಸಿವಿಲ್ ಇಂಜಿನಿಯರರಾಗಿದ್ದರೂ ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ, ಜನಪರ ಕಾಳಜಿಯುಳ್ಳವರಾಗಿದ್ದು ಸಹಾಯ ಕೇಳಿ ತಮ್ಮ ಬಳಿಗೆ ಬಂದವರಿಗೆ ನೆರವು ನೀಡುತ್ತಾ ಎಲ್ಲರ ಮನಗೆದ್ದಿದ್ದಾರೆ, ಅವರ ಸೇವೆ, ಸಾಧನೆ ಗುರುತಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿರುವುದು ಹೆಚ್ಚಿನ ಖುಷಿ ನೀಡಿದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿ, ಪುರಸ್ಕಾರ, ಸ್ಥಾನಮಾನ ಲಭಿಸಲಿ’ ಎಂದು ಹಾರೈಸಿದರು.
ಇಸ್ಲಾಂ ಮತ್ತು ಅಂಬೇಡ್ಕರ್ ಬಗೆಗೆ ಸೂಲಿಬೆಲೆ ಸುಳ್ಳುಗಳು
ಇಂಜಿನಿಯರರಾದ ವಿಶ್ವನಾಥ ಗುಬ್ಬೇವಾಡ, ಅಂಬರೀಷ ಪಾಟೀಲ್, ರಾಜಶೇಖರ ಉಪ್ಪಿನ್, ಅನಿಲ್ ಮುದಾಳೆ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಮಿಕ ಗುತ್ತೇದಾರರಾದ ಸಂಜೀವಕುಮಾರ ಶಿಂಧೆ, ಹನುಮಂತ ಆಮ್ಟೇಕರ್, ಸುಭಾಷ ಮಾವನೂರಕರ್, ಸಾಗರ್, ಉದಯ, ಪಂಡಿತ ಕೊರಳ್ಳಿ, ರತನ್ ನಿಂಬಾಳಕರ್, ಮೊಹ್ಮದ್ ನಿಜಾಮುದ್ದಿನ್, ಇಬ್ರಾಹಿಂ ಮತ್ತಿತರರು ಇದ್ದರು. ಸಿವಿಲ್ ಇಂಜಿನಿಯರ್ ರುದ್ರಮುನಿ ಪುರಾಣಿಕ ನಿರೂಪಿಸಿ ವಂದಿಸಿದರು.