ಕಲಬುರಗಿ: ವಸಂತ ಕಾಲ ಬಂದರೆ ಜಾತ್ರಾ ಉತ್ಸವಗಳೇ ಜಾಸ್ತಿ. ಯುಗಾದಿ ಆಚರಿಸುವ ಮೂಲಕ ಹೊಸ ಕಳೆ ತರುವ ಜಾತ್ರೆಗಳು ನಮ್ಮ ಗ್ರಾಮೀಣ ಸಂಸ್ಕೃತಿಯ ಜೀವಾಳಗಳು. ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಆಶ್ರಯದಲ್ಲಿರ ರವಿವಾರ ನಡೆದ ಆನ್‌ಲೈನ್ ಕವಿಗೋಷ್ಠಿ ಸ್ಪರ್ದೆ ಏರ್ಪಡಿಸಲಾಗಿತ್ತು.
ಘಟಕದ ಜಿಲ್ಲಾದ್ಯಕ್ಷ ಮಹಾಂತೇಶ ಎನ್ ಪಾಟೀಲ ಯಾತನೂರ ಅವರ ನೇತೃತ್ವದಲ್ಲಿ ’ನಮ್ಮೂರು ಜಾತ್ರೆ’ ಎಂಬ ಶಿರ್ಷಿಕೆಯಡಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಯುವ ಕವಿಗಳು, ಹಿರಿಯರು ಭಾಗವಹಿಸಿದರು. ಇವರಲ್ಲಿ ಅತ್ಯುತ್ತಮ ಮೂರು ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಮೂರು ಮೆಚ್ಚುಗೆ ಕವನಗಳೆಂದು ಆಯ್ಕೆ ಮಾಡಲಾಗಿದೆ.
ಶಿಕ್ಷಕಿ ಅನುಸೂಯಾ ನಾಗನಳ್ಳಿ(ಪ್ರಥಮ), ಶರಣ ರೆಡ್ಡಿ ಕೋಡ್ಲಾ (ದ್ವಿತೀಯ) ಹಾಗೂ ಅಶ್ವೀನಿ ಎಂ ಪಾಟೀಲ(ತೃತೀಯ) ಆಯ್ಕೆಯಾದರು.
ಹಾಗೂ ಉಮಾ ಆರ್ ಪ್ರದಾನ, ಸರೋಜಾದೇವಿ ಆರ್ ಎನ್ ರತ್ನಾ ಎಂ ಅಂಗಡಿ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಶಿಕ್ಷಕಿ ವಿಜಯಲಕ್ಷ್ಮೀ ಗುತ್ತೇದಾರ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ೨೫ ಜನ ಕವಿಗಳು ಭಾಗವಹಿಸಿದರು. ಇವರ ಎಲ್ಲಾ ಕವನಗಳು ಅರ್ಥಪೂರ್ಣವಾಗಿದ್ದವು.