ಸೊಲ್ಲಾಪುರ : ಸರಕಾರದ ಮಲತಾಯಿ ಧೋರಣೆ ಮತ್ತು ಅಸಹಕಾರದಿಂದ ಮಹಾರಾಷ್ಟ್ರದ ಕನ್ನಡಿಗರ ಸ್ಥಿತಿ ಚಿಂತಾಜನಕವಾಗಿದೆ. ಅವರ ಸಮಸ್ಯೆಗಳನ್ನು ಯಾರೂ ಕೇಳುವವರೆ ಇಲ್ಲದಂತಾಗಿದೆ. ಅದಕ್ಕಾಗಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವು ಮಹಾರಾಷ್ಟ್ರ ಕನ್ನಡಿಗರ ಬೆಂಬಲಕ್ಕೆ ಸದಾ ನಿಲ್ಲುತ್ತದೆ ಮತ್ತು ಸಮಸ್ಯೆ ಪರಿಹಾರಕ್ಕಾಗಿ ಕೂಡಲೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜನೆ ಮಾಡುವಂತೆ ಕೇಳಿಕೊಳ್ಳುತ್ತೇನೆ ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಹೇಳಿದರು.
ಆದರ್ಶ ಕನ್ನಡ ಬಳಗ ಮಹಾರಾಷ್ಟ್ರದ ನಿಯೋಗವು ಗಡಿ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರಕ್ಕೆ ಭೇಟಿ ನೀಡಿದ ಸಭೆಯಲ್ಲಿ ಅವರು ಮಾತನಾಡಿ, ಮಹಾರಾಷ್ಟ್ರದಲ್ಲಿ ಕನ್ನಡ ಭಾμÉ ಸಾಹಿತ್ಯ-ಸಂಸ್ಕøತಿಯ ಬೆಳವಣಿಗೆಗಾಗಿ ಪ್ರತಿ ತಿಂಗಳು ಗಡಿ ಸಾಹಿತ್ಯ- ಸಂಸ್ಕೃತಿ ಸಂಭ್ರಮ ಆಚರಣೆ ಮಾಡಲಾಗುವುದು. ಪ್ರತಿ ವರ್ಷ ಗಡಿನಾಡ ಕನ್ನಡ ಸಾಧಕರಿಗೆ ಡಾ. ಜಯದೇವಿತಾಯಿ ಲಿಗಾಡೆ ಮತ್ತು ಕೈಯಾರ ಕಿಞ್ಞಣ್ಣ ರೈ ಹೆಸರಿನಲ್ಲಿ ಪ್ರಶಸ್ತಿ ಕೊಡಲಾಗುವದು ಎಂದರು.
ಹತಗುಂದಾ ಜಾನಪದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ
ಮಹಾರಾಷ್ಟ್ರದ ಕನ್ನಡ ಶಾಲೆಗಳ ಉಳಿವಿಗಾಗಿ ವಿಶೇಷ ಕ್ರಿಯಾಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಗಡಿಯಲ್ಲಿ ಕನ್ನಡಕ್ಕಾಗಿ ಹೋರಾಡಿದ ಧೀಮಂತರ ಸ್ಮಾರಕಗಳನ್ನು ಕಟ್ಟಲಾಗುವದು. ಅಲ್ಲದೆ ಸೊಲ್ಲಾಪುರದಲ್ಲಿ ಡಾ. ಜಯದೇವಿತಾಯಿ ಲಿಗಾಡೆಯವರ ಸ್ಮಾರಕಕ್ಕೆ ಮೊದಲು ಆದ್ಯತೆ ನೀಡಲಾಗುವುದು ಎಂದು ಡಾ. ಸಿ.ಸೋಮಶೇಖರ್ ಭರವಸೆ ನೀಡಿದರು.
ಮಹಾರಾಷ್ಟ್ರ ಸರಕಾರದ ದ್ವಂದ್ವ ನೀತಿ ಮತ್ತು ಕರ್ನಾಟಕ ಸರಕಾರದ ನಿರ್ಲಕ್ಷ್ಯದಿಂದ ಮಹಾರಾಷ್ಟ್ರ ಕನ್ನಡಿಗರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕರ್ನಾಟಕ ಸರಕಾರ ಬೇಗ ಎಚ್ಚೆತ್ತುಕೊಂಡು ನಮ್ಮ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು ಎಂದು ಆದರ್ಶ ಕನ್ನಡ ಬಳಗದ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜಮಶೆಟ್ಟಿ ಹೇಳಿದರು.
ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ
ಈ ಸಭೆಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ, ಸೋಮಶೇಖರ್ ಜಮಶೆಟ್ಟಿ, ಶರಣಪ್ಪಾ ಫುಲಾರಿ, ಗುರುಬಸು ವಗ್ಗೋಲಿ, ಕಲ್ಮೇಶ ಅಡಳಟ್ಟಿ, ಶರಣು ಕೋಳಿ, ಬಿರೇಶ ಖೋತಿ ಸೇರಿದಂತೆ ಮೋದಲಾದವರಿದ್ದರು.
ಗಡಿ ಅಭಿವೃದ್ಧಿ ಪ್ರಾಧಿಕಾರವು ಕಳೆದ ಹಲವು ವರ್ಷಗಳಿಂದ ಗಡಿಯಲ್ಲಿ ಕನ್ನಡ ಉಳಿವಿಗಾಗಿ ವಿಶೇಷ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ಸರಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ನೀಡಿದೆ. ಆದರೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 5 ಕೋಟಿ ಕೊಟ್ಟಿದ್ದು ಗಡಿ ಕನ್ನಡಿಗರಿಗೆ ಮುಜುಗರಂಟು ಮಾಡಿದೆ. ಗಡಿಯಲ್ಲಿ ಕನ್ನಡ ಬೆಳೆಯಬೇಕಾಗಿದ್ದರೆ ಕರ್ನಾಟ ಸರಕಾರ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿವರ್ಷ ನೀಡುವಂತೆ 60 ಕೋಟಿ ಅನುದಾನ ಬೇಗ ಬಿಡುಗಡೆ ಮಾಡಬೇಕು.- ಮಲಿಕಜಾನ್ ಶೇಖ, ಅಧ್ಯಕ್ಷರು, ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರ.