ವಿಶ್ವ ಪರಂಪರೆ ದಿನಾಚರಣೆಯ ಅಂಗವಾಗಿ ಇನ್‌ಟ್ಯಾಕ್‌ನಿಂದ “ಹೊಳಕುಂದಾ ದರ್ಶನ”

0
19

ಕಲಬುರಗಿ:ವಿಶ್ವ ಪರಂಪರೆ ದಿನಾಚರಣೆಯ ಅಂಗವಾಗಿ ಕಲಬುರಗಿ ಇನ್‌ಟ್ಯಾಕ್ ಅಧ್ಯಾಯದ ವತಿಯಿಂದ “ಹೊಳಕುಂದಾ ದರ್ಶನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಹುಮನಾಬಾದ ರಸ್ತೆಯ ಮಾರ್ಗದಲ್ಲಿ ಕಲಬುರಗಿಯಿಂದ ೩೦ ಕಿ.ಮೀ. ದೂರದಲ್ಲಿ ಬರುವ ಈ ಗ್ರಾಮವು ಪರಂಪರೆಯ ಗ್ರಾಮವಾಗಿರುವುದರಿಂದ ಇಂತಹ ಗ್ರಾಮಗಳ ಇತಿಹಾಸ ಮತ್ತು ಪರಂಪರೆಯನ್ನು ಬೆಳಕಿಗೆ ತರುವ ದೃಷ್ಟಿಯಿಂದ ಹಾಗೂ ಕರ್ನಾಟಕ ಸರ್ಕಾರದ ಪ್ರವಸೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ ಸಿ.ಪಿ. ಯೋಗೇಶ್ವರ್ ಅವರು ಇತ್ತೀಚೆಗೆ ಕಲಬುರಗಿಗೆ ಭೇಟಿ ನೀಡಿದಾಗ ಹೊಳಕುಂದಾ ಸ್ಮಾರಕಗಳ ಅಭಿವೃದ್ಧಿಗೆ ೬.೦೦ ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಆದ್ದರಿಂದ ಇನ್‌ಟ್ಯಾಕ್ ಸಂಸ್ಥೆಯು ಅದೇ ಗ್ರಾಮದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

Contact Your\'s Advertisement; 9902492681

ವಿಶ್ವನಾಥ ಎ. ಭಕರೆ ಮತಯಾಚನೆ

ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಹಾಗೂ ಸಂಶೋಧಕರಾದ ಡಾ. ಶಂಭುಲಿಂಗ ಎಸ್. ವಾಣಿಯವರು ಹೊಳಕುಂದಾ ಗ್ರಾಮದ ಇತಿಹಾಸ ಮತ್ತು ಪರಂಪರೆಯ ಕುರಿತು ಉಪನ್ಯಾಸ ನೀಡುತ್ತಾ ಈ ಗ್ರಾಮವು ಕ್ರಿ.ಶ. ೧೫ನೇ ಶತಮಾನದಲ್ಲಿ ಇಸ್ಲಾಂ ಧರ್ಮದ ಒಂದು ಪ್ರಮುಖ ಕೇಂದ್ರವಾಗಿತ್ತು. ಬಹಮನಿ ಸುಲ್ತಾನರು ತಮ್ಮ ರಾಜಧಾನಿಯನ್ನು ಕ್ರಿ.ಶ. ೧೪೨೨-೨೪ ರಲ್ಲಿ ಕಲಬುರಗಿಯಿಂದ ಬೀದರಗೆ ವರ್ಗಾಯಿಸಿದರು.

ಆಗ ದೇಶ-ವಿದೇಶಿಯ ಸಂತರು, ವಿದ್ವಾಂಸರು, ಪಂಡಿತರು ಗೋವಾ ಬಂದರು ಹಾಗೂ ದೆಹಲಿ ಮತ್ತು ದೌಲತಾಬಾದಗಳ ಮೂಲಕ ಕಲಬುರಗಿಯ ಮಾರ್ಗವಾಗಿ ಬೀದರಗೆ ಹೋಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಸುಲ್ತಾನರಿಂದ ಕೆಲವು ವಿಶ್ರಾಂತಿ ಧಾಮಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಹೊಳಕುಂದಾ ಗ್ರಾಮವೂ ಸಹ ಒಂದು ಸಂತರ ವಿಶ್ರಾಂತಿ ಧಾಮವಾಗಿತ್ತು. ಫಿರೋಜಶಹಾ ಖ್ವಾಜಾ ಬಂದಾನವಾಜರನ್ನು ಕಲಬುರಗಿಗೆ ಆಹ್ವಾನಿಸಿದಂತೆ ಆತನ ಸಹೋದರ ೧ನೇ ಅಹ್ಮದ ಶಹಾನು ಕೀರ್ಮಾನದ ಸಂತರನ್ನು ಬೀದರಗೆ ಆಹ್ವಾನಿಸಿದನು. ಶಹಾ ನೂರುಲ್ಲಾಹ ಕೀರ್ಮಾನಿಯವರು ಬೀದರಗೆ ಬಂದು ನೆಲೆ ನಿಂತು ಇಲ್ಲಿಯೇ ಅವರು ನಿಧನ ಹೊಂದಿದರು. ಅವರ ಸಮಾಧಿ ದರ್ಶನಕ್ಕೆ ಬರುವ ಅಪಾರ ಸಂಖ್ಯೆಯ ಧರ್ಮವಂತರು ಬೀದರಗೆ ಆಗಮಿಸುತ್ತಿದ್ದರು.

ಕಲ್ಯಾಣ ನಡೆಗೆ ತಾತ್ಕಾಲಿಕ ಬ್ರೆಕ್, ಕೊರೊನಾ ವಿರುದ್ಧ ಅಭಿಯಾನ ಶುರು

ಅವರಲ್ಲಿ ಹಜರತ್ ಶರೀಫರು ಪ್ರಮುಖರಾಗಿದ್ದರು. ಈ ಸಂತರು ಹೊಳಕುಂದಾದಲ್ಲಿ ನೆಲೆ ನಿಂತು ಇಲ್ಲೆ ನಿಧನ ಹೊಂದಿದರು. ಅವರ ಸಮಾಧಿಯು ಹೊಳಕುಂದಾ ಗ್ರಾಮದಲ್ಲಿದೆ. ಅವರ ನಂತರ ಬಂದ ಹಲವು ಸಂತರು ಸಹ ಇದೇ ಗ್ರಾಮದಲ್ಲಿ ವಾಸವಾಗಿದ್ದು, ಇಲ್ಲೆ ನಿಧನ ಹೊಂದಿರುವ ಪ್ರಯುಕ್ತ ಇಲ್ಲಿ ಒಟ್ಟು ಏಳು ಸಮಾಧಿಗಳು ಹಾಗೂ ಒಂದು ಪ್ರಾರ್ಥನಾಲಯ ಈ ಪ್ರದೇಶದಲ್ಲಿ ಇದೆ. ಇದು ಹೊಳಕುಂದಾ ಸಾತಗುಂಬಜ ಎಂದು ಖ್ಯಾತ ಪಡೆದಿದೆ. ಇಲ್ಲಿಯ ಕಟ್ಟಡಗಳು ಇಂಡೋ-ಇಸ್ಲಾಂ, ಇಂಡೋ-ಬಹಮನಿ ಹಾಗೂ ಪರ್ಶೋ-ಬಹಮನಿ ಶೈಲಿಯಲ್ಲಿವೆ. ಈ ಗ್ರಾಮದ ಹೊರವಲಯದಲ್ಲಿ ಸುಮಾರು ಸಾವಿರಾರು ಸಂಖ್ಯೆಯ ಸಮಾಧಿಗಳು ಕಂಡು ಬರುತ್ತವೆ. ಈ ಎಲ್ಲಾ ಸಮಾಧಿಗಳು ಸಂತರ ಅನುಯಾಯಿಗಳದ್ದು ಆಗಿರಬಹುದೆಂದು ಡಾ. ವಾಣಿಯವರು ತಮ್ಮ ಉಪನ್ಯಾಸದಲ್ಲಿ ಹೇಳಿದರು.

ಡಾ. ಶಶಿಶೇಖರ ರೆಡ್ಡಿ, ಪ್ರಾಧ್ಯಾಪಕರು, ಸರ್ಕಾರಿ ಮಹಿಳಾ ಕಾಲೇಜು, ಕಲಬುರಗಿ ಇವರು ಕಲ್ಯಾಣ ಕರ್ನಾಟಕದ ಪರಂಪರೆ ಮಹತ್ವವನ್ನು ಕುರಿತು, ಇಲ್ಲಿಯ ಪ್ರಮುಖ ಕಟ್ಟಡಗಳು ಹಾಗೂ ರಕ್ಷಣೆ ಕುರಿತು ಮಾತನಾಡಿದರು. ಡಾ. ಭೀಮಣ್ಣ ಘನಾತೆ, ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಮಹಿಳಾ ಕಾಲೇಜು, ಕಲಬುರಗಿಯವರು ವಿಜಯನಗರದ ಐತಿಹಾಸಿಕ ಪರಂಪರೆಯನ್ನು ಕುರಿತು ಮಾತನಾಡಿದರು. ಡಾ. ಟಿ.ವ್ಹಿ. ಅಡವೇಶ, ಪ್ರಾಧ್ಯಾಪಕರು, ಸರ್ಕಾರಿ ಸ್ವಾಯತ್ತ ಕಾಲೇಜು, ಕಲಬುರಗಿ ಇವರು ವಂದನಾರ್ಪಣೆ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಸ್ವಾಯತ್ತ ಕಾಲೇಜು, ಕಲಬುರಗಿಯ ಇತಿಹಾಸ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಇನ್‌ಟ್ಯಾಕ್ ಪದಾಧಿಕಾರಿಗಳು ಹಾಗೂ ವಿಷಯ ಆಸಕ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here