ಶಹಾಬಾದ: ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಮತ್ತ? ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಮತ್ತು ನಗರದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಕೋವಿಡ್ ಸಂಬಂಧ ಮಾಹಿತಿಗಳನ್ನು ಒದಗಿಸಲುನಗರದ ೫ ಪ್ರದೇಶಗಳಲ್ಲಿ ಕೋವಿಡ್ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ. ನಗರಸಭೆಯ ಮುಂಭಾಗದಲ್ಲಿ, ಬಸವೇಶ್ವರ ವೃತ್ತ, ಬೆಂಡಿ ಬಜಾರ,ಬಸ್ ನಿಲ್ದಾಣ, ಭಂಕೂರ ವೃತ್ತದಲ್ಲಿ ಸ್ಥಾಪನೆ ಮಾಡಲಾಗಿದ್ದು, ಇಬ್ಬರು ಶಿಕ್ಷಕರನ್ನು ಹಾಗೂ ಒಬ್ಬ ಹೋಮ್ ಗಾರ್ಡ ನೇಮಿಸಲಾಗಿದೆ.
ಮೇ 4ರ ವರೆಗೆ ಅಂಗಡಿಗಳು ಸಂಪೂರ್ಣ ಬಂದ್: ವರ್ಮಾ
ಪ್ರತಿ ದಿನ ಬೆಳಿಗ್ಗೆ ೬ರಿಂದ ೨ ವರೆಗೆ ಇಬ್ಬರು ಶಿಕ್ಷಕರು ಹಾಗೂ ಮಧ್ಯಾನ ೨ರಿಂದ ರಾತ್ರಿ ೧೦ವರೆಗೆ ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ.ಸಾರ್ವಜನಿಕರು ಯಾವುದೇ ತೊಂದರೆಯಾಗದಂತೆ ಮದುವೆ, ಕೋವಿಡ್ ರೋಗಿಗಳಿಗೆ ಆಸ್ಪತ್ರೆ ಸೌಲಭ್ಯ, ಯಾವ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಿದ್ದಾರೆ.ಕೋವಿಡ್ ಸಂಬಂಧ ಯಾವುದೇ ಮಾಹಿತಿಗಳು ಬೇಕಾದರೆ ಮಾಹಿತಿ ಕೇಂದ್ರಗಳಿಗೆ ಹೋಗಿ ವಿಚಾರಿಸಬಹುದು. ಆದರೆ ಅನಾವಶ್ಯಕವಾಗಿ ಹೊರಗೆ ಬರದೇ, ಮನೆಯಲ್ಲೇ ಇದ್ದು ತಾಲೂಕಾಡಳಿತಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಅಲ್ಲದೇ ಕೋವಿಡ್ ನಿಯಮಗಳನ್ನು ತಪ್ಪಿ ನಡೆದರೆ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಹಾಬಾದನಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲು ಒತ್ತಾಯ
ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಕಂದಾಯ ನಿರೀಕ್ಷಕ ವೀರಭದ್ರಪ್ಪ, ಗ್ರಾಮ ಲೆಕ್ಕಿಗ ಶ್ರೀಮಂತ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಲಕ್ಷ್ಮಿಕಾಂತ ವಾಲೀಕಾರ ಸೇರಿದಂತೆ ಇತರರು ಇದ್ದರು.