ಮೇ 4ರ ವರೆಗೆ ಅಂಗಡಿಗಳು ಸಂಪೂರ್ಣ ಬಂದ್: ವರ್ಮಾ

0
231

ಶಹಾಬಾದ : ರಾಜ್ಯದಲ್ಲಿ ಕೋವಿಡ್ ಸೊಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ಬುಧವಾರ ಹೊರಡಿಸಿದ  ಆದೇಶವನ್ನು ಬದಲಿಸಿ ಹೊಸ ಆದೇಶದ ಪ್ರಕಾರ ನಗರದ ಕಿರಾಣಿ, ಹಾಲು, ಮೆಡಿಕಲ್ ಹೊರತುಪಡಿಸಿ ಗುರುವಾರ ಮಧ್ಯಾನದಿಂದಲೇ ಎಲ್ಲಾ ಅಂಗಡಿಗಳು ಬಂದ್ ಮಾಡಲು ತಹಸೀಲ್ದಾರ ಸುರೇಶ ವರ್ಮಾ ಹಾಗೂ ಪಿಎಸ್‌ಐ ತಿರುಮಲೇಶ ಅಖಾಡಕ್ಕೆ ಇಳಿದು ಅಂಗಡಿಗಳನ್ನು ಮುಚ್ಚಿಸಿದರು.

ಹಠಾತನೇ ಗುರುವಾರ ಆದೇಶ ಬಂದಿದ್ದರಿಂದ ನಗರದ ಎಲ್ಲಾ ಅಂಗಡಿಗಳನ್ನು ಮೇ ೪ರವರೆಗೆ ಬಂದ್ ಮಾಡಲು ಆದೇಶಿಸಲಾಗಿದ್ದರಿಂದ, ಮಧ್ಯಾನದಿಂದಲೇ ಆದೇಶವನ್ನು ಅನುಷ್ಠಾನಕ್ಕೆ ತರಲು ತಾಲೂಕಾಡಳಿತ ಮುಂದಾದರು.ಸರ್ಕಾರ ಬುಧವಾರ ಹೊರಡಿಸಿದ ಆದೇಶದಂತೆ ಬೆಳಿಗ್ಗೆಯಿಂದ ವ್ಯಾಪಾರಸ್ಥರು ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿದ್ದರು. ಆದರೆ ಮತ್ತೆ ಗುರುವಾರ ಸರ್ಕಾರದ ಹೊಸ ಆದೇಶ  ಬಂದಿದ್ದರಿಂದ ಕಿರಾಣ, ಹಾಲು ಮೆಡಿಕಲ್ ಹೊರತುಪಡಿಸಿ ಎಲ್ಲಾ ಅಂಗಡಿಗಳು ಮುಚ್ಚುವಂತೆ ಆದೇಶಿಸಿದರು.ನಗರದ ಮುಖ್ಯ ಬಜಾರ, ಬೆಂಡಿ ಬಜಾರ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿ ಸಂಚರಿಸಿ ವ್ಯಾಪಾರಸ್ಥರಿಗೆ ತಿಳಿ ಹೇಳಿ ಮುಚ್ಚುವಂತೆ ಮನವಿ ಮಾಡಿದರು.

Contact Your\'s Advertisement; 9902492681

ಶರಣಬಸವೇಶ್ವರ ಜಾತ್ರೆ ರದ್ದು: ಸುರೇಶ ವರ್ಮಾ

ಅದಕ್ಕೆ ನಗರದ ವ್ಯಾಪಾರಸ್ಥರು ಸಹಕಾರ ನೀಡಿದರು. ಅಲ್ಲದೇ ಭಂಕೂರ ಗ್ರಾಮದಲ್ಲಿನ ಎಲ್ಲಾ ಅಂಗಡಿಗಳನ್ನು ಪೊಲೀಸರು ಮಾಡಿಸುತ್ತಿರುವುದು ಕಂಡು ಬಂದಿತು. ಮೇ ೪ ರವರೆಗೆ ಕಿರಾಣ, ಹಾಲು ಮೆಡಿಕಲ್ ಹೊರತುಪಡಿಸಿ ಯಾವುದೇ ಅಂಗಡಿಗಳನ್ನು ತೆರೆಯಕೂಡದು.ಒಂದು ವೇಳೆ ಸರ್ಕಾರದ ಮಾರ್ಗಚೂಚಿಗಳನ್ನು ಪಾಲನೆ ಮಾಡದೇ ಹೋದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಸಾರ್ವಜನಿಕರಿಗೆ ಬೇಕಾದ ದಿನಸಿ ಅಂಗಡಿ, ತರಕಾರಿ, ಮೆಡಿಕಲ್ ಹಾಗೂ ಆಸ್ಪತ್ರೆಗಳು ತೆರೆದಿರುತ್ತವೆ. ಆದರೆ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಬಂದರೆ ಅವರು ವಿರುದ್ಧ ಕ್ರಮಕೈಗೊಳ್ಳಲಾಗುವುದು.ಆದ್ದರಿಂದ ಯಾರು ಮನೆಯಿಂದ ಹೊರಗಡೆ ಬರಬಾರದೆಂದು ತಿಳಿಸಿದರು.

ಶಹಾಬಾದನಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲು ಒತ್ತಾಯ

ವ್ಯಾಪಾರಸ್ಥರಾದ ನರೇಂದ್ರ ವರ್ಮಾ, ಅರುಣ ಪಟ್ಟಣಕರ್, ಶರಣು ಜೇರಟಗಿ, ಎಎಸ್‌ಐ ವೆಂಕಟೇಶ, ಪೊಲೀಸ್ ಸಿಬ್ಬಂದಿಗಳಾದ ವಿಶ್ವಾನಾಥ ಹೂಗಾರ, ಓಬಳೇಶ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here