ಕಲಬುರಗಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಜಿಲ್ಲಾ ಸಮಿತಿಯಿಂದ ಅಲ್ಪಸಂಖ್ಯಾತರ ಮತ್ತು ದಲಿತರ ಮೇಲೆ ನಿರಂತರ ದೌರ್ಜನ್ಯ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಮೋಹಸಿನ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ದಲಿತರ ಮತ್ತು ಮುಸ್ಲಿಂರ ಮೇಲೆ ನಿರಂತರ ದೌರ್ಜನ್ಯ ಪ್ರಕರಣಗಳು ಹೆಚ್ಚುತಿವೇ ಎಂದು ಆರೋಪಿಸಿ, ರಾಜ್ಯಾದಲ್ಲಿ ದಲಿತ ಯುವಕನ ಬೆತ್ತಲೆ ಪ್ರಕರಣ, ದಾವಣಗೆರೆಯಲ್ಲಿ ಮುಸ್ಲಿಂ ಯುವಕನ ಕೊಲೆ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಸ್ಲಿಂ ಯುಕವರ ಮೇಲೆ ಅಟ್ರಾಸಿಟಿ ಪ್ರಕರಣಗಳು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮೈನಾರಿಟಿ ಕಮಿಷನ್ ದುರ್ಬಲವಾಗಿದೆ ಆದರಿಂದ ದಲಿತರ ಮತ್ತು ಮುಸ್ಲಿಂರ ಮೇಲೆ ನಿರಂತರ ದೌರ್ಜನ್ಯ ವೆಸಗಲಾಗುತ್ತಿದೆ ಎಂದು ದೂರಿದರು. ಅಲ್ಪಸಂಖ್ಯಾತರ ಮತ್ತು ದಲಿತರ ಮೇಲೆ ದೌರ್ಜನ್ಯ ಪ್ರಕರಣ ತಡೆಗಟುವ ನಿಟ್ಟಿನಲ್ಲಿ ಮೈನಾರಿಟಿ ಕಮಿಷನ್ ರಾಜ್ಯದಲ್ಲಿ ಬಲಿಷ್ಠಗೊಳಿಸಬೇಕೆಂದು ಪ್ರತಿಭಟನೆ ನಡೆಸುವ ಮೂಲಕ ಸರಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಬ್ದುಲ್ ರಹೀಮ್, ಡಾ. ರೀಜ್ವಾನ್, ಅಲಿಂ ಇಲಾಹಿ, ಮಹ್ಮದ್ ರಫೀಕ್ ಮಹ್ಮದ್ ಫಾರೂಕ್, ಮೌಲಾನಾ ಅನಸರ್ ಪಟೇಲ್ ಸೇರಿದಂತೆ ಮುಂತಾದವರು ಇದ್ದರು.