ಶಹಾಪುರ: ಸರ್ಕಾರವು ಈಗ ನೀಡುತ್ತಿರುವ 5 ಕೆ.ಜಿ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದರಿಂದ ಸಾಯಬೇಕೇ ಬದುಕಬೇಕೇ ಎಂದು ರೈತನೊಬ್ಬ ಕೇಳಿದ್ದಕ್ಕೆ ಸಾಯಿ ಎಂದು ಆಹಾರ ಮತ್ತು ನಾಗರೀಕ ಖಾತೆ ಸಚಿವ ಸಚಿವ ಉಮೇಶ್ ಕತ್ತಿ ಹೇಳಿದ್ದು ಖಂಡನೀಯವಾಗಿದೆ ಎಂದು ಶಿವು ಆಂದೋಲಾ ಶಿರವಾಳ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಸಚಿವನಾಗಿ ಈ ರೀತಿ ಅಸಂಬದ್ಧವಾಗಿ ಉಡಾಫೆಯ ಮಾತನಾಡಿರುವುದು ಸರಿಯಲ್ಲ. ಕೋವಿಡ್ ಪಿಡುಗು ಕಾಡುತ್ತಿರುವ ಇಂತಹ ಸಂದರ್ಭದಲ್ಲಿ ಉದ್ಯೋಗವೂ ಇಲ್ಲ, ಆದಾಯವೂ ಇಲ್ಲ. ಇಂತಹ ಸಂದರ್ಭದಲ್ಲಿ ಅನ್ನ ಸಂಪಾದಿಸುವುದೂ ಕಷ್ಟವಾಗಿದೆ.
ಇಂತಹ ಸಮಯದಲ್ಲಿ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರದ ಭಾಗವಾಗಿರುವ ಸಚಿವರು ಹೀಗೆ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿ ಸಮಧಾನ ವ್ಯಕ್ತಪಡಿಸಿದ್ದಾರೆ.
ಉಡಾಫೆ ಉತ್ತರ ನಿಡಿದ ಕತ್ತಿ ಅವರು ಕುಡಲೆ ರಾಜೀನಾಮೆ ನೀಡಬೇಕು ಎಂದು ಭೀಮ್ ಆರ್ಮಿ ಯಾದಗಿರಿ ಜಿಲ್ಲೆ ಉಸ್ತುವಾರಿ ಶಿವು ಆಂದೋಲಾ ಶಿರವಾಳ ಆಗ್ರಹಿಸಿದ್ದಾರೆ.