ಕಲಬುರಗಿ: ಕೊರೊನಾ ಮಹಾಮಾರಿ ಎರಡನೇ ಅಲೆ ಗಂಭೀರವಾಗಿ ರಾಜ್ಯ ಸರಕಾರ ವಿಶೇಷವಾಗಿ ಕಲಬುರಗಿ ಜಿಲ್ಲೆ ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ ಸರಕಾರದಿಂದ ಜನರಿಗೆ ಸಿಗುವ ಅನುಕೂಲಗಳು ಸಿಗುತ್ತಿಲ್ಲ. ಜನರ ಮೇಲೆ ಸಂಪೂರ್ಣ ಜವಾಬ್ದಾರಿ ಬಿಟ್ಟಿದ್ದಾರೆ. ಇದರಿಂದಾಗಿ ಜನರಲ್ಲಿ ಅಸಮಧಾನ ಉಂಟಾಗಿದೆ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಶೀಘ್ರದಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು ಇಲ್ಲದಿದ್ದರೆ ಜಿಲ್ಲೆಯ ಸ್ಥತಿ ಇನ್ನೂ ಗಂಭೀರವಾಗಲಿದೆ ಎಂದು ನಗರಾಭಿವೃದ್ಧಿ ಪ್ರಾಧೀಕಾರದ ಮಾಜಿ ಅಧ್ಯಕ್ಷರಾದ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಮುಖ್ಯಮಂತ್ರಿಗಳಲ್ಲಿ ಆತಂಕ ವ್ಯಕ್ತಪಡಿಸುವ ಮೂಲಕ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎರಡನೇ ಅಲೆ ಬಂದು 20 ದಿನಗಳ ಬಳಿಕವು ಆಕ್ಸಿಜನ್ ಸ್ಟೋರೆಜ್ ಪ್ಲಾಂಟ್ ಜಿಲ್ಲಾಡಳಿತ ಮತ್ತು ಸರಕಾರದಿಂದ ಯಾವುದೇ ಕ್ರಮ ಕೈಗೊಳಲಾಗಿಲ್ಲ. ಪಾಜಿಟಿವ್ ವರದಿ ಬಂದ ರೋಗಿಯ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕ ಹೊಂದಿದವರ ಪತ್ತೆ ಹಚ್ಚುವ ಕಾರ್ಯಾ ಇನ್ನೂ ನಡೆದಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿರುವ ಕಂಟೋನ್ಮೆಂಟ್ ಝೋನ್ ಪ್ರದೇಶಗಳಲ್ಲಿರುವ ಆಸ್ಪತ್ರೆ ಮತ್ತು ಪ್ರದೇಶಗಳನ್ನು ಸ್ಯಾನಿಟೈಜ್ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ಹಿಂದೇಟು: ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು
ದಿನೆ ದಿನೆ ಸೋಂಕು ಹೆಚ್ಚುತ್ತಿದ್ದು, ಚೈನ್ ಬ್ರೇಕ್ ಮಾಡಲು ಮತ್ತು ಇನ್ನೂ 15 ದಿನಗಳ ವರೆಗೆ ಲಾಕ್ ಡೌನ್ ಇರುವುದರಿಂದ ಯಾವುದೇ ಯೋಜನೆ ಮತ್ತು ಮತ್ತು ಕಾರ್ಯಕ್ರಮಗಳು ಸರಕಾರ ತಯಾರಿಸಿಲ್ಲ. ಇದು ಕೊರೊನಾ ನಿಯಂತ್ರಣದ ಬೇಜವ್ದಾರಿ ವರ್ತನೆಯಾಗಿದೆ ಎಂದರು.
ಆಕ್ಸಿಜನ್, ರೆಮಿಸಿವಿರ್ ಇಂಜಿಕ್ಸನ್ ಮತ್ತು ಮೃತದೇಹ ಅಂಬುಲೇನ್ಸ್ ಹೆಸರಲ್ಲಿ ಸಾವಿರಾರು ರೂಪಾಯಿ ಲೋಟಿ ಮಾಡಲಾಗುತ್ತಿದೆ. ತಕ್ಷಣ ಈ ಸಮಸ್ಯೆಗಳಿಗೆ ಪರಿಹಾರ ಸಿಗದಿದರೆ ಜಿಲ್ಲೆಯ ಸ್ಥಿತಿ ಇನ್ನೂ ಗಂಭೀರವಾಗುವ ಸಾಧ್ಯತೆ ಹೆಚ್ಚುಗಲಿದ್ದು, ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಮೇಲೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.