ಸಂಪೂರ್ಣ ಲಾಕ್‍ಡೌನ್‍ಗೆ ಚಿಂತನೆ: ಸುಧಾಕರ್

0
44

ಕಲಬುರಗಿ: ಪ್ರಕರಣಗಳು ಹತೋಟಿಗೆ ಬರದೇ ಇದ್ದಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿ ಲಾಕ್‍ಡೌನ್ ಹೇರುವ ಚಿಂತನೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ನಗರದ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳನ್ನು ನಿಯಂತ್ರಣಕ್ಕೆ ಈಗಾಗಲೇ ಎರಡು ವಾರ ಕಫ್ರ್ಯೂ ವಿಧಿಸಿದ್ದು, ಕೊರೊನಾ ಪ್ರಕರಣಗಳನ್ನು ಕಡಿಮೆ ಮಾಡುವ ಯೋಚನೆಯಲ್ಲಿ ಸರ್ಕಾರ ಇನ್ನೂ ಎರಡು ವಾರ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ, ಪರಿಸ್ಥಿತಿ ಕೈ ಮೀರಿದರೇ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡು ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡುವ ಇರಾದೆ ಸರ್ಕಾರದ ಹತ್ತಿರವಿದೆ ಎಂದು ಸಚಿವ ಡಾ. ಸುಧಾಕರ್ ಪ್ರತಿಕ್ರಿಯಿಸಿದರು.

Contact Your\'s Advertisement; 9902492681

ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲೂ ಕಳೆದ 44 ದಿನಗಳಿಂದ ಲಾಕ್‍ಡೌನ್ ವಿಧಿಸಿದರೂ ನಿನ್ನೆ ಸ್ವಲ್ಪ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ, ಹೀಗಾಗಿ ಲಾಕ್‍ಡೌನ್ ಘೋಷಿಸಿದರೇ ಮಾತ್ರ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ, ಬದಲಾಗಿ ಸಾರ್ವಜನಿಕರು ಸರ್ಕಾರದ ಕ್ರಮಗಳಿಗೆ ಹಾಗೂ ಪರಿಷ್ಕೃತ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಇಂದಿಲ್ಲಿ ಹೇಳಿದರು.

ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ಹಿಂದೇಟು: ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು

2 ಕೋಟಿ ಲಸಿಕೆಗೆ ಮನವಿ: ರಾಜ್ಯದಲ್ಲಿ 18 ವರ್ಷದ ಮೆಲ್ಪಟ್ಟು ಹೊಂದಿದ್ದ ನಾಗರೀಕರಿಗೆ ಇಂದಿನಿಂದ ಲಸಿಕೆ ನೀಡಲು ಉದ್ದೇಶಿಸಲಾಗಿದ್ದು, ಕೋವಿಡ್ ವ್ಯಾಕ್ಸೀನ್ ಕಂಪನಿಗೆ ಸುಮಾರು2 ಕೋಟಿ ಲಸಿಕೆ ಒದಗಿಸುವ ಕುರಿತಾಗಿ ಒತ್ತಡ ಹೇರಲಾಗಿದೆ. ಈಗಾಗಲೇ 3 ಲಕ್ಷ ಲಸಿಕೆ ಲಭ್ಯವಿದ್ದು, ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು 18 ವರ್ಷ ಮೆಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಡಾ. ಕೆ. ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ 6 ಸಾವಿರ ಲಸಿಕಾ ಕೇಂದ್ರಗಳು ಹೊಂದಿದ್ದು, ಎಲ್ಲೆಡೆಯೂ ಲಸಿಕೆ ನೀಡಬೇಕಾದರೇ ಕನಿಷ್ಟ 6 ಲಕ್ಷ ಲಸಿಕೆ ಇದ್ದರೆ ರಾಜ್ಯದ ಜನರಿಗೆ ನೀಡಬಹುದಿತ್ತು, ಸದ್ಯಕ್ಕೆ 3 ಲಕ್ಷ ವ್ಯಾಕ್ಸಿನ್‍ನಲ್ಲಿ ಚಾಲನೆ ನೀಡಿ ಇನ್ನುಳಿದ ಲಸಿಕೆಗಳು ಕ್ರಮವಾಗಿ ರಾಜ್ಯಕ್ಕೆ ಬರಲಿದ್ದು, ತದನಂತರ 18 ವರ್ಷದ ಮೆಲ್ಪಟ್ಟ ವ್ಯಕ್ತಿಗಳಿಗೆ ಎಲ್ಲರಿಗೂ ಲಸಿಕೆ ಒದಗಿಸುವ ಮಹತ್ವಕಾಂಕ್ಷೆ ಹೊಂದಲಾಗಿದೆ ಎಂದರು.

ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ಹಿಂದೇಟು: ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು

ರಾಜ್ಯದಲ್ಲಿ ಈಗಾಗಲೇ ಶೇ. 80 ರಷ್ಟು ಜನರಿಗೆ ಕೋವಿಡ್ ಲಕ್ಷಣವಿಲ್ಲದೇ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಶೇ. 10 ರಿಂದ 15 ರವರೆಗೆ ಕಡಿಮೆ ಪ್ರಮಾಣದ ಲಕ್ಷಣ ಹೊಂದಿದವರಿಗೆ ಸೋಂಕು ದೃಢವಾಗುತ್ತಿದ್ದರೆ ಇನ್ನುಳಿದಂತೆ ಶೇ. 5 ರಿಂದ 8 ರಷ್ಟು ಜನರಿಗೆ ಕೇವಲ ಹೇದರಿಕೆಯಿಂದ ಸೋಂಕಿಗೆ ಒಳಗಾಗುತ್ತಿದ್ದಾರೆ, ಇಲ್ಲಿ ಪ್ರತಿಯೊಬ್ಬ ಕೋವಿಡ್ ಸೋಂಕಿತರಿಗೆ ರೆಮ್‍ಡಿಸಿವಿಯರ್ ತೆಗೆದುಕೊಂಡರೇ ಕಡಿಮೆಯಾಗುತ್ತದೆ ಎಂಬ ತಪ್ಪು ಗ್ರಹಿಕೆ ಮೂಡಿಸಲಾಗುತ್ತಿದೆ ಹೀಗಾಗಿ ಈ ತಪ್ಪು ಗ್ರಹಿಕೆ ಯಾರು ಮಾಡಿಕೊಳ್ಳಬಾರದೆಂದು ಡಾ, ಸುಧಾಕರ್ ಅವರು ಹೇಳಿದರು.

ರೆಮಡಿಸಿವಿಯರ್ ಔಷಧಿ ಎಂತವರಿಗೆ ನೀಡಬೇಕೆಂದು ರಾಜ್ಯದ ವೈದ್ಯರಿಗೆ ಮಾಹಿತಿ ರವಾನಿಸಿ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗುತ್ತದೆ ಎಂದರು.

ಖಾಸಗಿ ಸ್ಕ್ಯಾನರ್‍ಗಳಿಗೆ ಎಚ್ಚರ: ರಾಜ್ಯದಲ್ಲಿ ಸಿಟಿ ಸ್ಕ್ಯಾನ್ ಮಾಡುವುದರಲ್ಲಿ ಖಾಸಗಿ ಸ್ಕ್ಯಾನ್ ಆಸ್ಪತ್ರೆಗಳಲ್ಲಿ ಬಡವರ್ಗದವರಿಗೆ ಸಾಕಷ್ಟು ಪ್ರಮಾಣದಲ್ಲಿ ದುಡ್ಡು ವಸೂಲಿ ಮಾಡುತ್ತಿರುವ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ, ಬೇರೆಡೆ ಎಷ್ಟು ಎದೆದುಕೊಳ್ಳತ್ತಾರೆ ಅದೇ ರೀತಿಯ ದರ ರಾಜ್ಯದಲ್ಲಿ ನಿಗದಿ ಮಾಡಬೇಕು, ಇಲ್ಲದಿದ್ದರೇ ಹೆಚ್ಚಿನ ದುಡ್ಡು ಕೇಳಿದ್ದಲ್ಲಿ ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಮಾಧ್ಯಮ ವರ್ಗದವರ ಪ್ರಶ್ನೆಯೊಂದಕ್ಕೆ ಸಚಿವ ಡಾ. ಸುಧಾಕರ್ ಅವರು ಉತ್ತರಿಸಿದರು.

ಈ ಸಂದರ್ಭದಲ್ಲಿ ಎನ್‍ಇಕೆಆರ್ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್, ಜಿಲ್ಲಾಧಿಕಾರಿ ವಿ.ವಿ ಜೋತ್ಸ್ನಾ ಮತ್ತಿತರ ಶಾಸಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here