ಕೊರೊನಾ ಕುರಿತು ಯಾವುದೇ ಸಮಸ್ಯೆ ಇದ್ದಲ್ಲಿ ಅಧಿಕಾರಿಗಳ ಸಂಪರ್ಕಿಸಿ: ರಾಜುಗೌಡ

0
26

ಸುರಪುರ: ರೆಮ್ಡಿ ಸಿವಿರ್ ಸೇರಿದಂತೆ ಕೊರೊನಾಗೆ ಸಂಬಂಧಿಸಿದಂತೆ ಏನೆ ಸಮಸ್ಯೆ ಇದ್ದಲ್ಲಿ ಜನರು ನಮ್ಮನ್ನಾಗಲಿ ಅಥವಾ ಅಧಿಕಾರಿಗಳನ್ನಾಗಲಿ ಸಂಪರ್ಕಿಸುವಂತೆ ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.

ನಗರದ ತಹಸೀಲ್ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಮೊದಲಿಗಿಂತಲು ಈಬಾರಿಯ ಸೊಂಕು ತುಂಬಾ ವೇಗವಾಗಿ ಹರಡುತ್ತಿದ್ದು ಜನರು ತುಂಬಾ ಎಚ್ಚರಿಕೆಯನ್ನು ವಹಿಸುವಂತೆ ಹಾಗು ಅನಾವಶ್ಯಕವಾಗಿ ಹೊರಗೆ ಬಾರದೆ ಮನೆಯಲ್ಲಿಯೆ ಇರುವಂತೆ ಹಾಗು ಹೊರಗೆ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು.ಅಲ್ಲದೆ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗು ಸಲಹೆ ನೀಡಿ ಯಾವುದೇ ಕೋವಿಡ್ ಕುರಿತು ಜನರು ಸಂಪರ್ಕಿಸಿದಲ್ಲಿ ಅವರಿಗೆ ಸಕಾಲಕ್ಕೆ ಸ್ಪಂಧಿಸುವಂತೆ ಹಾಗು ಆಸ್ಪತ್ರೆಗಳಲ್ಲಿಯೂ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ಗಮನಕ್ಕೆ ತರುವಂತೆ ತಿಳಿಸಿದರು.

Contact Your\'s Advertisement; 9902492681

ಕೋವಿಡ್ ಕೇರ್ ಸೆಂಟರ್‌ಗೆ ಶಾಸಕ ರಾಜುಗೌಡ ಭೇಟಿ

ನಂತರ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ,ಈಗಾಗಲೇ ಎರಡು ಕೋವಿಡ್ ಕೇರ್ ಸೆಂಟರ್‌ಗಳ ತಯಾರಿ ಮಾಡಿಕೊಂಡಿದ್ದು ೧೭೦ ಹಾಸಿಗೆಗಳನ್ನು ಸಿದ್ಧ ಪಡಿಸಲಾಗಿದೆ ಅಲ್ಲದೆ ತಾಲೂಕಿನ ಬಂಡೊಳ್ಳಿ ಹಾಗು ಮಲ್ಲಾ ಬಿ ಗ್ರಾಮದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು ಹೊರ ರಾಜ್ಯಗಳಿಂದ ಬರುವವರ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಹಾಗು ಬೆಂಗಳೂರು ಭಾಗದಿಂದ ಬಂದ ಜನರನ್ನು ೨೭ ಮತ್ತು ೨೮ ನೇ ತಾರೀಖು ಎರಡು ದಿನಗಳ ಕಾಲ ಕವಡಿಮಟ್ಟಿ ಕೃಷಿ ಸಂಶೋಧನಾ ಕೇಂದ್ರದ ಬಳಿ ಕೋವಿಡ್ ಪರೀಕ್ಷೆಯನ್ನು ನಡೆಸಿ ಸುರಪುರ ಶಹಾಪು ಮತ್ತು ಯಾದಗಿರಿ ತಾಲೂಕಿನ ಜನರಿಗೆ ಮನೆಯಲ್ಲಿ ಇರುವಂತೆ ಸಲಹೆ ನೀಡಿರುವುದಾಗಿ ತಿಳಿಸಿದರು.

ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ಹಿಂದೇಟು: ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು

ನಂತರ ಹುಣಸಗಿ ತಹಸೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ್ ಹಾಗು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ತಾಲೂಕು ಪಂಚಾಯತಿ ಇಒ ಅಂಬ್ರೇಶ ಸೇರಿದಂತೆ ಆರೋಗ್ಯ ಇಲಾಖೆ ಹಾಗು ಕಕ್ಕೇರಾ ಕೆಂಭಾವಿ ವಲಯಗಳ ಉಪ ತಹಸೀಲ್ದಾರರು ಮತ್ತು ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಓಂಕಾರೆಪ್ಪ ಪೂಜಾರಿ ಹುಣಸಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅರುಣಕುಮಾರ ಚವ್ಹಾಣ ಸೇರಿದಂತೆ ವಿವಿಧ ಅಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಸಭೆಯಲ್ಲಿ ವೈದ್ಯಾಧಿಕಾರಿ ಹರ್ಷವರ್ಧನ ರಫಗಾರ ಹುಣಸಗಿ ತಾಲೂಕು ಪಂಚಾಯತಿಯ ಶರಣಗೌಡ ಕೆಂಭಾವಿ ಪುರಸಭೆಯ ಪ್ರಕಾಶ ಬಾಗ್ಲಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here