ಸುರಪುರ: ನಗರದಲ್ಲಿ ಕೊರೊನಾ ಸೊಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರಂಭಿಕವಾಗಿ ಕೆಲ ವಾರ್ಡ್‌ಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದರು.
ನಗರದ ವಿವಿಧ ವಾರ್ಡ್‌ಗಳಲ್ಲಿ ನಡೆದ ಸಿಂಪಡಣೆ ಕುರಿತು ಮಾತನಾಡಿ,ಸದ್ಯ ಮೊದಲ ಹಂತವಾಗಿ ನಗರಸಭೆ ವಾರ್ಡ್ ಸಂಖ್ಯೆ ೫,೬,೮ ಮತ್ತು ೧೦ ರಲ್ಲಿ ಸೊಂಕಿನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದುದರಿಂದ ಇಂದು ಈ ನಾಲ್ಕು ವಾರ್ಡ್‌ಗಳಲ್ಲಿ ಸಿಂಪಡಿಸಲಾಗುತ್ತಿದ್ದು,ನಂತರ ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಸಿಂಪಡಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಗರಸಭೆ ವಾಹನದ ಮೂಲಕ ಸ್ಯಾನಿಟೈಜರ್ ಸಿಂಪಡಣೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿಗಳಾದ ಶಿವಪುತ್ರ ಸೇರಿದಂತೆ ಅನೇಕರಿದ್ದರು.