ನನಗೆ ಜರಗನಹಳ್ಳಿ ಶಿವಶಂಕರ್ ಅವರು ಪರಿಚಯವಾದದ್ದು ನಮ್ಮ ಧಾರವಾಡದ ‘ಸಲ್ಮಾಲಾ ಓ ನನ್ನ ಸಲ್ಮಾಲ್” ಖ್ಯಾತಿಯ ಸಾಹಿತಿ ಚಂದ್ರಶೇಖರ ಪಾಟೀಲರಿಂದ. ಹಾಗಾಗಿ ನನಗೆ ಅವರ ಸಾವು ಅತೀವ ನೋವು ತಂದಿತು.
ಕವಿ ಹಾಗೂ ಚಿಂತಕ ಜರಗನಹಳ್ಳಿ ಶಿವಶಂಕರ್ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರು. ಕೆಲ ದಿನಗಳ ಹಿಂದೆಯೇ ಅವರು ಕೋವಿಡ್ ಪೀಡಿತರಾಗಿದ್ದರು ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮರಣ ಹೊಂದಿದ್ದಾರೆ.
1949 ರಲ್ಲಿ ಜರಗನಹಳ್ಳಿ ಯಲ್ಲಿ ಜನಿಸಿದ ಜರಗನಹಳಿ ಶಿವಶಂಕರ ಅವರು, ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದವರು. ಬ್ಯಾಂಕ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ ಅವರು, ಸ್ವಯಂ ನಿವೃತ್ತಿ ಪಡೆದ ಬಳಿಕವೂ ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದವರು.
ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ: ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು, ಸಾವಿರಕ್ಕೂ ಹೆಚ್ಚು ಹನಿಗವನಗಳನ್ನು ಬರೆದು ಪ್ರಕಟಿಸಿದ್ದಾರೆ. ” ಮಳೆ “, “ಆಲಿಕಲ್ಲು”, “ದೇವರ ನೆರಳು” ಮೊದಲಾದ ಕವನ ಸಂಕಲಗಳು ಅವರ ಸಾಹಿತ್ಯ ಕೃಷಿಯ ಮಜಲುಗಳು. ಇವರ ಹನಿಗವನಗಳ ಸಂಕಲನ ‘ಝರಿ’ ಉರ್ದು, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೂ ಅನುವಾದಗೊಂಡಿವೆ.
ಅವರ ಹನಿಗವನಗಳು ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಜರಗನಹಳ್ಳಿ ಶಿವಶಂಕರ್ ಅವರಿಗೆ ಸಂದಿವೆ.
# ಜರಗನಹಳ್ಳಿ ಶಿವಶಂಕರ್ ಅವರ ಸಾಹಿತ್ಯ ಸಾಧನೆ ಯೂ..!: ಜರಗನಹಳ್ಳಿ ಶಿವಶಂಕರ್ ಜನಿಸಿದ್ದು 1949 ಸೆಪ್ಟೆಂಬರ್ 8 ರಂದು. ಜರಗನಹಳ್ಳಯವರಾದ ಅವರು ಬೆಂಗಳೂರು ಮಹಾನಗರದಲ್ಲಿ ವಾಸವಾಗಿದ್ದರು. ಜರಗಹಳ್ಳಿ ಶಿವಶಂಕರ್ ಅವರು ವಾಣಿಜ್ಯ ಪದವೀಧರರಾಗಿರು. ಮೂಲತಃ ಬ್ಯಾಂಕ್ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದಿದ್ದ ಜರಗನಹಳ್ಳಿ ಶಿವಶಂಕರ್ ವೃತ್ತಿ ಜೀವನದ ಜೊತೆಯಲ್ಲಿ ಸಾಹಿತ್ಯ ರಚನೆಯನ್ನೂ ಪ್ರವೃತ್ತಿಯಾಗಿ ಕೈಗೊಂಡಿದ್ದವರು.
ಚಂದ್ರಶೇಖರ ಪಾಟೀಲರು ಅಧ್ಯಕ್ಷರಾಗಿರಾಗಿದ್ದ ವೇಳೆಯಲ್ಲಿ ಜರಗನಹಳ್ಳಿ ಶಿವಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದರು. ಅವರು ಕನ್ನಡದ ಕೆಲಸಕ್ಕೆ ಸದಾ ನಿಸ್ಪರಹರಾಗಿ ಶ್ರಮಿಸುತ್ತಿದ್ದವರು.
ಶಿವಶಂಕರ್ ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಹನಿಗವನಗಳನ್ನು ಬರೆದು ಪ್ರಕಟಿಸಿದವರು. “ಮಳೆ”, “ಆಲಿಕಲ್ಲು”, “ದೇವರ ನೆರಳು” ಮೊದಲಾದ ಕವನ ಸಂಕಲಗಳು ಅವರ ಸಾಹಿತ್ಯ ಕೃಷಿಯ ಮಜಲುಗಳು. ಇವರ ಹನಿಗವನಗಳ ಸಂಕಲನ ‘ಝರಿ’ ಉರ್ದು, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೂ ಅನುವಾದಗೊಂಡಿವೆ. “ಮೊಟ್ಟೆ” ಎಂಬ ಹನಿಗವನ ಮೊಟ್ಟೆ ಒಳಗಿನಿಂದ ಒಡದರೆ ಜೀವ, ಹೊರಗಿನಿಂದ ಒಡೆದರೆ ಸಾವು – ಎನ್ನುವ ಮೂಲಕ ಅತಿ ಕಡಿಮೆ ಪದಗಳಲ್ಲಿ ಅತಿ ಸಂಕೀರ್ಣವಾದ ವಿಷಯಗಳನ್ನು ಪ್ರಸ್ತುತ ಪಡಿಸಿರುತ್ತಾರೆ.
ದೆಹಲಿ ಆಕಾಶವಾಣಿ ಏರ್ಪಡಿಸಿದ್ದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡವನ್ನು ಪ್ರತಿನಿಧಿಸಿದ್ಸ ಶಿವಶಂಕರ್ ಅವರು ಹಲವಾರು ಕನ್ನಡ ಪತ್ರಿಕೆಗಳ ಅಂಕಣಕಾರರಾಗಿಯೂ ಹೆಸರಾಗಿದ್ದವರು. ದುಬೈ ಮತ್ತು ಶಾರ್ಜಾಗಳಿಗೂ ಪ್ರವಾಸ ಹೋಗಿ ಕನ್ನಡ ಸಂಬಂಧಿ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದಿವರು. ಇವರ ಹನಿಗವನಗಳು ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ. ಇವರನ್ನು ಅರಸಿ ಬಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು.
ಇವುಗಳಲ್ಲಿ ಪ್ರಮುಖವಾದವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಭೂಷಣ ಪ್ರಶಸ್ತಿಗಳು ಉಲ್ಲೇಖನೀಯ. ಜರಗನಹಳ್ಳಿ ಶಿವಶಂಕರ್ ಸಾಹಿತ್ಯ ಕೃಷಿ ಹೀಗೆಯೇ ಮುಂದುವರೆದಿತ್ತು,