ಬೀದರ್: ತಾಲ್ಲೂಕಿನ ಚಿಟ್ಟಾವಾಡಿ ಗ್ರಾಮದಲ್ಲಿರುವ ವಿಶ್ವನಾಥ ನಿರ್ಗತಿಕ ಮಕ್ಕಳ ಕುಟಿರದಲ್ಲಿ ತಂದೆ ಅಥವಾ ತಾಯಿ ಇಲ್ಲದ ೧ನೇ ತರಗತಿಯಿಂದ ೭ನೇ ತರಗತಿ ವರೆಗಿನ ಎಲ್ಲ ವರ್ಗದ(ಪರಿಶಿಷ್ಟ ಜಾತಿಯಿಂದ ಹಿಡಿದು ಸಾಮಾನ್ಯ ವರ್ಗದ ಆದಿಯಾಗಿ) ಮಕ್ಕಳಿಗೆ ಉಚಿತ ವಸತಿ ನಿಲಯದ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಸ್ಥೆ ಶೋಭಾವತಿ ಫುಲಿಕರ್ ಅವರು ತಿಳಿಸಿದ್ದಾರೆ.
ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಶೌಚಾಲಯಗಳು, ಸೋಲಾರಯುಕ್ತ ಬಿಸಿ ನೀರಿನ ಸ್ನಾನಗೃಹಗಳು, ಸೋಲಾರ ವಿದ್ಯುತ್ ಸೌಕರ್ಯ, ನುರಿತ ಶಿಕ್ಷಕರಿಂದ ಟಿವಿಶನ್ ಸೌಕರ್ಯ, ಪೌಷ್ಟಿಕ ಯುಕ್ತ ಆಹಾರ, ಹಾಲು, ಮೊಟ್ಟೆ, ಶಾಲೆಗೆ ಹೋಗಿ ಬರಲು ವಾಹನದ ವ್ಯವಸ್ಥೆ ಇತ್ಯಾದಿ ಉತ್ತಮ ವ್ಯವಸ್ಥೆಯುಳ್ಳ ಹಾಸ್ಟೆಲ್ ಸೌಲಭ್ಯ ಇದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಆಸಕ್ತರು ಜೂನ್ ೩೦ರೊಳಗಾಗಿ ಶೋಭಾವತಿ ಫುಲಿಕರ್, ಮುಖ್ಯಸ್ಥರು, ವಿಶ್ವನಾಥ ನಿರ್ಗತಿಕ ಮಕ್ಕಳ ಕುಟಿರ, ಅಂಬೇಡ್ಕರ್ ವೃತ್ತದ ಬಲಗಡೆ, ಚಿಟ್ಟಾವಾಡಿ, ತಾ.ಜಿ-ಬೀದರ್-೫೮೫೪೦೩ ದೂರಬಾಣಿ ಸಂಖ್ಯೆ 9889698044 /6364383324 ಈ ದೂರವಾಣಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.