ಪತ್ರಕರ್ತರಿಗೆ ಉಚಿತ ಕೋವಿಡ್ ಲಸಿಕೆ ನೀಡಲು ಸಿಎಂ ಸೂಚನೆ

0
19

ಬೆಂಗಳೂರು: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಪತ್ರಕರ್ತರು ಹಾಗೂ ಮಾಧ್ಯಮಗಳಲ್ಲಿರುವ ಸಿಬ್ಬಂದಿಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿರುತ್ತಾರೆ.

ಅದರಂತೆ ಆರೋಗ್ಯ ಇಲಾಖೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಲು ಕೋರಲಾಗಿದ್ದು, ಈ ಲಸಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾಧ್ಯಮ ಪಟ್ಟಿಯಲ್ಲಿ ಸೇರಿರುವ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಚಾನಲ್ ಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಹಾಗೂ ಸಿಬ್ಬಂದಿಗಳ ಮಾಹಿತಿಯನ್ನು ಸಂಗ್ರಹಿಸುತ್ತಿದೆ.

Contact Your\'s Advertisement; 9902492681

ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಲಸಿಕೆ ಪಡೆಯಲು ಇಚ್ಛಿಸುವ ಪತ್ರಕರ್ತರ ಹಾಗೂ ಸಿಬ್ಬಂದಿಗಳ ಹೆಸರು, ಹುದ್ದೆ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಸಹಿತ ವಿವರಗಳ ಪಟ್ಟಿಯನ್ನು  ಹೊಂದಿರುವ ಅಧಿಕೃತ ಪತ್ರವನ್ನು ಇಲಾಖೆಯ ಕೇಂದ್ರ ಕಚೇರಿಗೆ ಮುದ್ದಾಂ ತಲುಪಿಸಲು ಹಾಗೂ ಇ-ಮೇಲ್ ವಿಳಾಸ  journalistvaccination@gmail.com      ಗೆ  (word file) ಕಳುಹಿಸಿ  ಕೊಡಲು ಕೋರಿದೆ. ಬೆಂಗಳೂರು ನಗರದ ವಿವಿಧ ಜ಼ೋನ್ ಗಳಲ್ಲಿ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಹಾಗೂ ಆನೇಕಲ್) ಲಸಿಕಾ ಕೇಂದ್ರವನ್ನು ನಿಗದಿ ಪಡಿಸಲಾಗುವುದು. ಹಾಗಾಗಿ ತಮ್ಮ ಸಂಸ್ಥೆ ಯಾವ ಜ಼ೋನ್ ಗೆ ಒಳಪಡುತ್ತದೆ ಎಂಬುದನ್ನೂ ತಪ್ಪದೇ ಪತ್ರದಲ್ಲಿ ತಿಳಿಸುವುದು.

ಈ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ಕಳುಹಿಸಿ ಅವರು ನಿಗದಿಪಡಿಸಿದ ಕೇಂದ್ರದಲ್ಲಿ ಲಸಿಕೆ ಪಡೆಯಲು ದಿನಾಂಕ ಹಾಗೂ ಸಮಯ ತಿಳಿಸಲಾಗುವುದು. ಅದರಂತೆ, ನಿಗದಿತ ದಿನದಂದು ತಮ್ಮ ಸಂಸ್ಥೆಯ ಮುಖ್ಯಸ್ಥರಿಂದ  ನಿಗದಿತ ದೃಢೀಕರಣ ಪತ್ರ ಪಡೆದು, ಸಂಸ್ಥೆಯ ಗುರುತಿನ ಚೀಟಿ ಹಾಗೂ ಆಧಾರ್ ಸಂಖ್ಯೆಯೊಂದಿಗೆ ತಾವೇ ಖುದ್ದು  www.cowin.gov.in     ಪೋರ್ಟಲ್ ನಲ್ಲಿ ಅಥವಾ ಲಸಿಕಾ ಕೇಂದ್ರದಲ್ಲಿ ನೋಂದಾಯಿಸಿಕೊಂಡು  ತಪ್ಪದೇ ಲಸಿಕೆ ಪಡೆದುಕೊಳ್ಳುವಂತೆ ತಿಳಿಸಲು ಮಾನ್ಯ ಆಯುಕ್ತರಿಂದ ನಿರ್ದೇಶಿತಳಾಗಿದ್ದೇನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here