ಹಿರಿಯ ಪತ್ರಕರ್ತ ಕಾಗಲ್ಕರ್ ನಿಧನಕ್ಕೆ ಡಾ. ಅಜಯ್ ಸಿಂಗ್ ಕಂಬನಿ

0
28

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಪತ್ರಕರ್ತರು, ಸಂಯುಕ್ತ ಕರ್ನಾಟಕ ಕಲಬುರಗಿ ಆವೃತ್ತಿ ಯ ಸ್ಥಾನಿಕ ಸಂಪಾದಕರು, ಆತ್ಮೀಯರು ಆಗಿದ್ದಂತಹ ಜಯತೀರ್ಥ ಕಾಗಲಕರ್ ಅವರು ಕೊರೋನಾ ಸೋಂಕಿಗೆ ಬಲಿಯಾಗಿರುವ ವಿಚಾರ ತುಂಬ ದುಃಖ ಉಂಟುಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು, ಜೇವರ್ಗಿ ಮತಕ್ಷೇತ್ರದ ಶಾಸಕರಾದ  ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಹೇಳಿಕೆ ನೀಡಿರುವ ಅವರು ಮೂರು ದಶಕದಿಂದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತ ಈಚೆಗಷ್ಟೇ ಅವರು ಸ್ಥಾನಿಕ ಸಂಪಾದಕರ ಹುದ್ದೆಗೆ ಬಡ್ತಿ ಹೊಂದಿದ್ದರು. ತಮ್ಮ ವಿಶಿಷ್ಟ ವರದಿಗಳಿದಾಗಿಯೇ ಜನಮನ ಸೆಳೆಯುತ್ತಿದ್ದ ಅವರು ಅಭಿವೃದ್ಧಿ ವಿಚಾರಗಳನ್ನಿಟ್ಟುಕೊಂಡು ಮಾಡುತ್ತಿದ್ದ ವರದಿಗಳು ಅನೇಕ ಸಾರಿ ಆಡಳಿತದತ್ತ ಚಾಟಿ ಬೀಸುವಂತಿರುತ್ತಿದ್ದವು. ಅವರ ಅಕಾಲಿಕ ನಿಧನ ಈ ಭಾಗದ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.

Contact Your\'s Advertisement; 9902492681

ಸದಾ ನಗು ಮೊಗದವರಾಗಿದ್ದುಕೊಂಡು ಸರಳ, ಸೌಮ್ಯ ಸ್ವಭಾವದವರಾಗಿದ್ದಂತಹ ಕಾಗಲ್ಕರ್ ಅವರ ಅಕಾಲಿಕ ಅಗಲುವಿಕೆ ನಮಗೆ ತುಂಬ ನೋವು ಉಂಟು ಮಾಡಿದೆ. ದೇವರು ಅವರ ಕುಟುಂಬಕ್ಕೆ, ಬಂಧುಗಳಿಗೆ, ಮಿತ್ರರಿಗೆ, ಅಭಿಮಾನಿಗಳಿಗೆ ಅವರ ಅಗಲುವಿಕೆ ನೋವು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುವೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here