ಜೇವರ್ಗಿ: ಶಾಸಕರು ಹಾಗೂ ಪ್ರತಿ ಪಕ್ಷದ ಮುಖ್ಯ ಸಚೇತಕ ರಾಗಿರುವ ಡಾ.ಅಜಯ್ ಸಿಂಗ್ ರವರು ಇಂದು ಜೇವರ್ಗಿ ತಹಸಿಲ್ ಕಾರ್ಯಾಲಯದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದರು.
ಕೋವಿಡ್ 19 ಕುರಿತಂತೆ ಹಾಗೂ ಬೇಸಿಗೆಯ ಕಾಲವಾದ್ದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಕುರಿತಂತೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು ನಮ್ಮ ತಾಲ್ಲೂಕಿನಲ್ಲಿ ಇಲ್ಲಿವರೆಗೂ2258 ಕೋವಿಡ ಪ್ರಕರಣಗಳು ಬೆಳಕಿಗೆ ಬಂದಿದ್ದು ಇದರಲ್ಲಿ 1225ಜನರು ಗುಣಮುಖರಾಗಿದ್ದಾರೆ .ಎಂದು ತಿಳಿಸಿದರು .
ಒಂದು ಸಾವಿರಕ್ಕೂ ಹೆಚ್ಚು ಜನರು ಮನೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಇವರಿಗೆ ಸಾಮಾನ್ಯ ಲಕ್ಷಣಗಳು ಕಂಡುಬಂದಿವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಪ್ರಮಾಣಿಕವಾಗಿ ಕೋವಿಡ್ ಸೋಂಕಿತರ ನೆರವಿಗೆ ಬಾರದೆ ಕಾಲಹರಣ ಮಾಡುತ್ತಿದೆ ಇದರಿಂದಾಗಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಸಾವು-ನೋವುಗಳು ಸಂಭವಿಸುತ್ತಿವೆ ಎಂದು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ತಹಸೀಲ್ದಾರರಾದ ವಿನಯ್ ಕುಮಾರ್ ಪಾಟೀಲ್, ತಾಲೂಕ ವೈದ್ಯಾಧಿಕಾರಿಗಳಾದ ಡಾ.ಸಿದ್ದು ಪಾಟೀಲ್, ತಾಲೂಕು ಪಂಚಾಯತ್ ಮುಖ್ಯ ಅಧಿಕಾರಿಗಳಾದ ವಿಲಾಸ ರಾಜ್, ಯಡ್ರಾಮಿ ತಾಲೂಕ ದಂಡಾಧಿಕಾರಿಗಳಾದ ಶಾಂತಗೌಡ ಬಿರಾದಾರ್, ತಾಲೂಕು ಪುರಸಭೆಯ ಮುಖ್ಯ ಅಧಿಕಾರಿಗಳು ಶರಣಯ್ಯ ಹಿರೇಮಠ ,ಹಾಗೂ ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಸಂಗನಗೌಡ ಪಾಟೀಲ್, ಜೇವರ್ಗಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವಪ್ರಸಾದ್ ಸ್ವಾಮಿ, ಪಿಎಸ್ಐ ಸಂಗಮೇಶ್ ಅಂಗಡಿ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.