ಕಲಬುರಗಿಯಲ್ಲಿ ಬ್ಲ್ಯಾಕ್ ಫಂಗಸ್ ಆಗಮನದ ಶಂಕೆ: ಒಂದು ಸಾವು

0
129

ಕಲಬುರಗಿ:  ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಹೆಡ್ ಕಾನ್ಸ್ಟೇಬಲ್ ಓರ್ವರು ಮೃತಪಟ್ಟಿರುವ ಶಂಕೆ ಜಿಲ್ಲೆಯಲ್ಲಿ ವ್ಯಕ್ತವಾಗಿದೆ.

ಮಲ್ಲಿಕಾರ್ಜುನ ಬೆಳಗುಂಪಿ (45) ಮೃತ ಹೆಡ್ ಕಾನ್ಸ್ಟೇಬಲ್. ಕೋವಿಡ್ನಿಂದ ಬಳಲಿದ್ದ ಮಲ್ಲಿಕಾರ್ಜುನ್ ಗುಣಮುಖರಾಗಿದ್ದರು. ಬಳಿಕ ಕೆಲ ದಿನಗಳ ನಂತರ ಅವರಿಗೆ ಬ್ಲಾಕ್ ಫಂಗಸ್ ಮಾದರಿಯ ರೋಗ ಅಂಟಿಕೊಂಡು ಕಣ್ಣು, ಮೆದುಳು, ಕಿಡ್ನಿ ಸೇರಿ ದೇಹದ ಅಂಗಾಂಗಗಳು ಕಾರ್ಯ ಚಟುವಟಿಕೆ ನಿಲ್ಲಿಸಿದ್ದವು. ತಕ್ಷಣ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಿಸಿರಲಿಲ್ಲ.

Contact Your\'s Advertisement; 9902492681

ಹೀಗಾಗಿ ಮನೆಯಲ್ಲಿಯೇ ಇದ್ದು ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ದೇಹದ ಅಂಗಾಂಗಗಳ ವಿಪರೀತ ತೊಂದರೆಯಿಂದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ.

ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಮಲ್ಲಿಕಾರ್ಜುನ್ ಅವರು ಬ್ಲಾಕ್ ಫಂಗಸ್ನಿಂದಲೇ ಮೃತಪಟ್ಟಿದ್ದಾರೆಂದು ಖಚಿತಗೊಂಡಿಲ್ಲ. ಇನ್ನೊಂದೆಡೆ ಹೈ ಶುಗರ್, ಪಾರ್ಶ್ಚವಾಯು ಬಾಧಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆರೋಗ್ಯ ಇಲಾಖೆ ಇದರ ಬಗ್ಗೆ ಪರೀಶಿಲನೆ ಮಾಡಿ ಸ್ಪಷ್ಟತೆ ನೀಡಬೇಕಾಗಿದೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here