ಗ್ರಾಮಗಳಿಗೆ ವ್ಯಾಪಿಸುತ್ತಿರುವ ಕೊರೊನಾ: ಸೋಂಕು ತಡೆಗಟ್ಟಲು ಕನ್ನಡ ಭೂಮಿ ಆಗ್ರಹ

0
31

ಕಲಬುರಗಿ: ಜಗತ್ತನ್ನೇ ತಳ್ಳಣಗೊಳಿಸಿರುವ ಮಹಾಮಾರಿ ಕೊರೊನಾ 2 ನೇ ಅಲೆಯ ಸೋಂಕು ನಗರ ಪ್ರದೇಶಗಳಿಂದ ಗ್ರಾಮಗಳಿಗೆ ಹರಡುತ್ತಿದ್ದು ಕೂಡಲೇ ತಡೆಗಟ್ಟಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಮೀಣ ಪ್ರದೇಶದ ಜನರಿಗೆ ಕೊರೊನಾ ಜಾಗೃತಿ ಕುರಿತು ಅರಿವಿಲ್ಲ.ಮುಖಕ್ಕೆ ಮಾಸ್ಕ್ ಹಾಕುವುದಿಲ್ಲ, ದೈಹಿಕ ಅಂತರ ಕಾಪಾಡುವುದು ದೂರದ ಮಾತು.ನೆರೆಯ ರಾಜ್ಯಗಳಿಂದ ಹಾಗೂ ರಾಜ್ಯದ ವಿವಿಧ ನಗರಗಳಿಂದ ಕೆಲಸಕ್ಕಾಗಿ ಹೋಗಿರುವ ಜನರು ಅವರವರ ಗ್ರಾಮಗಳಿಗೆ ವಾಪಸ್ ಬಂದಿದ್ದಾರೆ.ಜೊತೆಗೆ ಅವರಿಗೆ ಸೋಂಕು ತಗುಲಿರುವುದರಿಂದ ಊರೇಲ್ಲ ಸೋಂಕು ಹರಡಲು ಕಾರಣರಾಗಿದ್ದಾರೆ.

Contact Your\'s Advertisement; 9902492681

ಇದರಿಂರ ರಾಜ್ಯ ಸೇರಿದಂತೆ ಕಲಬುರಗಿ ಜಿಲ್ಲೆಯಲ್ಲಿರುವ ಹಳ್ಳಿ ಹಳ್ಳಿಗಳಿಗೆ ಈಗಾಗಲೇ ಸೋಂಕು ವ್ಯಾಪಿಸುತ್ತಿದೆ.ಅನೇಕರು ಸೋಂಕಿಗೆ ತುತ್ತಾಗಿ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.ಶೀತ ಕೆಮ್ಮು,ಜ್ವರ ಕಾಣಿಸಿಕೊಂಡರೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗದೆ ಮೇಡಿಕಲ್ ಗಳಲ್ಲಿ ಸಿಗುವ ಔಷಧಿಗಳನ್ನು ಖರೀದಿಸಿ ಸ್ವಯಂಪ್ರೇರಿತ ಚೀಕಿತ್ಸೇಗೆ ಮುಂದಾಗುತ್ತಿದ್ದಾರೆ.ಇದರಿಂದ ಸೋಂಕು ಉಲ್ಬಣಗೊಂಡು ಪ್ರಾಣಾಪಾಯ ತಂದೋಡ್ಡಿದೆ.ಪರಿಸ್ಥಿತಿ ಕೈ ಮೀರುತ್ತಿದೆ.ಇಷ್ಟಾದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ.ಅವರ ಆರೋಗ್ಯ ವಿಚಾರಿಸಲು ಯಾರೋಬ್ಬರೂ ಮುಂದಾಗುತ್ತಿಲ್ಲ.

ಇನ್ನು ಕೇಲವರು ಸೋಂಕು ತಗಲಿದರೂ ಪರೀಕ್ಷೆಗೆ ಒಳಪಡಿಸಲು ಭಯದಿಂದ ಹಿಂಜರಿಯುತ್ತಿದ್ದಾರೆ.ಅಲ್ಲದೆ ನಗರಗಳಲ್ಲಿರುವ ಆಸ್ಪತ್ರೆಗಳಿಗೆ ಬರಲು ಹೇದರುತ್ತಿದ್ದಾರೆ.ಇವರ ಆರೈಕೆಗಾಗಿ ಕೂಡಲೇ ಗ್ರಾಮಗಳಲ್ಲಿ ಕೊವೀಡ ಕೇಂದ್ರಗಳನ್ನು ತೆರೆಯಬೇಕು.ಇಂಜಕ್ಷನ್, ಆಕ್ಸಿಜನ್ ಹಾಗೂ ಔಷಧಿಗಳನ್ನು ಪೂರೈಸಬೇಕು.ತುರ್ತು ಪರಿಸ್ಥಿತಿ ಉಂಟಾದರೆ ಅಂಬುಲೆನ್ಸ್ ಗಳ ವ್ಯವಸ್ಥೆ ಮಾಡಬೇಕು.ಸಾವುಗಳನ್ನು ತಡೆಯಬೇಕು.ಈಗಲಾದರೂ ಸರಕಾರ ಕೇವಲ ನಗರ ಪ್ರದೇಶಗಳ ಮೇಲೆ ಕೇಂದ್ರೀಕರಿಸದೇ ಗ್ರಾಮೀಣ ಭಾಗದಲ್ಲಿ ಹರಡುತ್ತಿರುವ ಸೋಂಕು ಕೂಡಲೇ ತಡೆಗಟ್ಟಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here