ಕಲಬುರಗಿ: ಕೊರೊನಾ ಸೋಂಕು ವೃದ್ಧರನ್ನೆ ಹೆಚ್ಚಾಗಿ ಬಲಿ ಪಡೆಯುತ್ತಿರುವ ಸೋಂಕು, ನಗರದ ಬಿದ್ದಾಪುರ ಕಾಲೋನಿಯ 94 ವರ್ಷದ ವೃದ್ದೆ ಕೊರೊನಾ ಸೋಂಕಿಗೆ ಸೋಲಿಸಿದ್ದಾರೆ.
ಕಲ್ಯಾಣಮ್ಮ ದುತ್ತರಗಾಂವ ಅವರು ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ಹೋದಾಗ ಅವರಲ್ಲಿ ಸೊಂಕು ಕಾಣಿಸಿಕೊಂಡಿತು. ನಂತರ ಕುಟುಂಬ ವೈದ್ಯರ ಮಾರ್ಗದರ್ಶನದಂತೆ ಮನೆಯಲ್ಲೇ ಇದ್ದುಕೊಂಡು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಂಡು ಮಾಹಾಮಾರಿ ಕೊರೊನಾ ರೋಗದ ಸೋಂಕಿನಿಂದ ಪೂರ್ತಿಯಾಗಿ ಗುಣಮುಖರಾಗಿದ್ದಾರೆ.
ಸೋಂಕಿನಿಂದ ಗುಣಮುಖರಾಗಲು ದೈರ್ಯ, ಸಕಾರಾತ್ಮಕ ವಿಚಾರಗಳು ಮತ್ತು ಸಕಾಲದಲ್ಲಿ ಸೂಕ್ತವಾದ ಚಿಕಿತ್ಸೆ ಪಡೆದರೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ಇವರ ಮೊಮ್ಮಗ ದೀಪಕ್ ಹೊಸಳ್ಳಿ.
ಹೀಗಾಗಿ ಜನ ಕೊರೊನಾ ಸೋಂಕಿನ ಬಗ್ಗೆ ಭಯಪಡದೇ ಎಚ್ಚರಿಕೆಯಿಂದ ಇದ್ದು, ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮುಂಜಾಗ್ರತೆ ಇರಲಿ, ಆದರೆ ಭಯ ಬೇಡ. ಪ್ರತಿಯೊಬ್ಬರೂ ಲಸಿಕೆಯನ್ನು ತಪ್ಪದೆ ಹಾಕಿಸಿಕೊಳ್ಳಬೇಕು.
ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸುತ್ತದೆ. ಲಸಿಕೆಯ ಬಗ್ಗೆ ಯಾವುದೇ ತರಹದ ತಪ್ಪು ಕಲ್ಪನೆ ಬೇಡ ಎಂದರು.