ಸೇಡಂ: ಕರೋನಾ ಎರಡನೇ ಅಲೆಯ ನಿಮಿತ್ಯ ಲಾಕಡೌನ ಹಾಕಲಾಗಿದ್ದು ಸೇಡಂ ತಾಲೂಕಿನ ಮಳಖೇಡ ಸಿಮೆಂಟ್ ಕಾರ್ಖಾನೆಯಲ್ಲಿರುವ ಸ್ಥಳಿಯ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸೇಡಂ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಅವರು ಕಾರ್ಖಾನೆಯ ಪ್ಯಾಕಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತಿರುವ ಸ್ಥಳಿಯ ಕಾರ್ಮಿಕರಿಗೆ ಲಾಕಡೌನ ಅಂಗವಾಗಿ ಕೇಲಸಕ್ಕೆ ತೆಗೆದುಕೊಳ್ಳದೆ ಬೆರೆ ರಾಜ್ಯದ ಕಾರ್ಮಿಕರಿಗೆ ಪ್ಯಾಕಿಂಗ್ ವಿಭಾಗದಲ್ಲಿ ಕೇಲಸಕ್ಕೆ ತೆಗೆದುಕೊಂಡು ಸ್ಥಳಿಯ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ.
ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತಿರುವ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಸಂಭವ ಇರುತ್ತದೆ. ಆದ ಕಾರಣ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತಿರುವ ಕಾರ್ಮಿಕರಿಗೆ 3 ವರ್ಷದವರೆಗಿನ ಕಾರ್ಪೋರೇಟ್ ಸಮಾಜಿಕ ಜವಾಬ್ದಾರಿ (ಸಿಎಸ್ ಆರ್) ನಿಧಿಯಲ್ಲಿ ಅವರ ಆರೋಗ್ಯದ ಜವಾಬ್ದಾರಿಯನ್ನು ವಹಿಸಿಕೋಳ್ಳಬೇಕು.
ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡಲೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ ಆರೋಗ್ಯದ ಹಿತದೃಷ್ಠಿಯಿಂದ ಕೂಡಲೇ ಕೋವಿಡ್ ಲಸಿಕೆ ಹಾಕಿಸಬೇಕು. ಎಂದು ಬಾಲರಾಜ್ ಗುತ್ತೇದಾರ ಒತ್ತಾಯಿಸಿದ್ದಾರೆ.