ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಪಂಚಾಯ್ತಿ ವತಿಯಿಂದ 500ರೂಪಾಯಿ ದಂಡ.
ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಸುಮಾನ್ ಚಂದ್ರು ರವರು ಮಾತನಾಡಿ ಕೋಲಾರ ಜಿಲ್ಲೆಯ ಕೈಗಾರಿಕಾ ಪ್ರದೇಶವಾದ ನರಸಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೊರೊನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ನರಸಾಪುರ ಗ್ರಾಮವನ್ನು ಮೇ 24 ರವರೆಗೆ ಗ್ರಾಮ ಪಂಚಾಯಿತಿ ವತಿಯಿಂದ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ನರಸಾಪುರದಲ್ಲಿ ಅಗತ್ಯ ವಸ್ತುಗಳಾದ ಮೆಡಿಕಲ್ ಸ್ಟೋರ್, ಆಸ್ಪತ್ರೆ, ನಂದಿನಿ ಹಾಲಿನ ಪಾರ್ಲರ್ ಹೊರತು ಪಡಿಸಿ ಇನ್ನಿತರ ಎಲ್ಲಾ ರೀತಿಯ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಜನರ ಹಿತದೃಷ್ಟಿಯಿಂದ ತರಕಾರಿಗಳನ್ನು ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಈಗಿದ್ದರು ಕೆಲವು ಅಂಗಡಿ ಮಾಲೀಕರು ಕದ್ದು ಮುಚ್ಚಿ ಅಂಗಡಿಗಳನ್ನು ತೆರದು ವ್ಯಾಪಾರ ಮಾಡುತ್ತಿದ್ದರು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಲಾಕ್ ಡೌನ್ ಉಲ್ಲಂಘಿಸಿ ತೆರೆದ ಅಂಗಡಿಗಳಿಗೆ 500 ರೂಪಾಯಿಗಳ ದಂಡವನ್ನು ವಿಧಿಸಿ, ಗ್ರಾಮದಲ್ಲಿ ಕರೋನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂಗಡಿಗಳನ್ನು ತೆರೆಯದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಮಾನ್ ಚಂದ್ರು, ರಾಜಣ್ಣ, ಕರೋನಾ ವಾರಿಯರ್ಸ್ ಗಳಾದ ಕೆ ಇ ಬಿ ಚಂದ್ರು, ರಾಜೇಂದ್ರ, ಹಾಲಿವುಡ್ ಮುನಿರಾಜು, ಕುಮಾರ್, ಎನ್ ಎಂ ಮಂಜುನಾಥ್, ನಾಗರಾಜ್, ಸಂತೋಷ್, ತಿಮ್ಮರಾಯಪ್ಪ ಮತ್ತಿತರರು ಇದ್ದರು.