ಜಾನಪದ ಕಲಾವಿದರ ಮಾಶಾಸನ ಬಿಡುಗಡೆಗೆ ಭಕರೆ ಆಗ್ರಹ

0
38

ಕಲಬುರಗಿ : ಕಲೆಯನ್ನು ನಂಬಿ ಬದುಕು ಸಾಗಿಸುತ್ತಿರುವ ಜಾನಪದ ಕಲಾವಿದರಿಗೆ ಕಳೆದ ಫೆಬ್ರವರಿ ತಿಂಗಳಿನಿಂದ ಮಾಶಾಸನ ಬಾರದೆ ಕರೋನಾ ಮಹಾಮಾರಿಯ ಸಂಕಷ್ಟ ಕಾಲದಲ್ಲಿ ಕಲಾವಿದರ ಕುಟುಂಬ ಆಪತ್ತಿಗೊಳಗಾಗಿದ್ದರಿಂದ ಅಲ್ಪ ಮಟ್ಟಿಗಾದರೂ ಮಾಶಾಸನ ಸಿಗುವಂತಾದರೆ ಕೊಂಚ ನೆಮ್ಮದಿಂದಿರಬಹುದು. ಅದಕ್ಕಾಗಿ ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕೆಂದು ಕಲಬುರಗಿ ಕ.ಸಾ.ಪ. ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಶ್ವನಾಥ ಭಕರೆ ಆಗ್ರಹಿಸಿದ್ದಾರೆ.

ಬಡ ಜಾನಪದ ಕಲಾವಿದರಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಮಾಶಾಸನ ಬರುತ್ತಿತ್ತು . ಸರ್ಕಾರಿ ಖಜಾನೆಯಿಂದ ಬರುತ್ತಿದ್ದ ಮಾಶಾಸನ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಂಜೂರಾತಿ ವರ್ಗಾವಣೆಯಾಗಿರುವ ಪ್ರಯುಕ್ತ ಸರಿಯಾದ ಸಮಯಕ್ಕೆ ಮಾಶಾಸನ ಬಾರದೆ ಕಲಾವಿದರ ಅಲ್ಪ ಸಹಾಯಕ್ಕೆ ಕತ್ತರಿ ಹಾಕಿದಂತಾಗಿದೆಂದು ಅವರು ಹೇಳಿದ್ದಾರೆ.

Contact Your\'s Advertisement; 9902492681

ಕಳೆದ ಒಂದು ವರ್ಷದಿಂದ ಎಲ್ಲೇಡೆ ಕರೋನಾ ಮಹಾಮಾರಿಯ ಹಾವಳಿಯಿಂದ ತತ್ತರಿಸಿ ಹೋದ ಕಲಾವಿದರ ಬಳಗಕ್ಕೆ ಎರಡನೇ ಅಲೆಯಿಂದ ಕಂಗೆಟ್ಟು ಹೋಗುವಂತಾಗಿದ್ದಾರೆ. ಕಲೆಯನ್ನೇ ನಂಬಿ ಬದುಕುವ ಇಂಥ ಬಡ ಕಲಾವಿದರಿಗೆ ಕರೋನಾ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಭಕರೆಯವರು ಖೇದ ವ್ಯಕ್ತಪಡಿಸಿದ್ದಾರೆ.

ಕಲಾವಿದರ ಪರಿಸ್ಥಿತಿ ಅರಿತ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಸಿ.ಎಂ. ನರಸಿಂಹಮೂರ್ತಿಯವರು ಕೂಡ ಮಾಶಾಸನ ಬಿಡುಗಡೆಗಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕಲಾವಿದರ ಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಈ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಮಾಶಾಸನ ಬಿಡುಗಡೆ ಮಾಡಬೇಕೆಂದು ಭಕರೆಯವರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here