“ರೋಗಿಯನ್ನು ಉಳಿಸಿ ಜೀವ ರಕ್ಷಿಸಿ”

0
9

ಕಲಬುರಗಿ: ಇಂದು ನಗರದ ದೇವಿ ನಗರದ ಬಡಾವಣೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಆನ್ ಲೈನ್ ಮೂಲಕ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಮಾತನಾಡುತ್ತಾ ಕೋವಿಡ ನಿಯಂತ್ರಣ ಮಾಡುವಲ್ಲಿ ಕಲಬುರಗಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಪೂರ್ಣಪ್ರಮಾಣದ ವೆಂಟಿಲೇಟರ್, ಆಕ್ಸಿಜನ್’,ಬೆಡ ಕೊರತೆಯಿಂದ ಹಾಗೂ ಸರಿಯಾದ ಚಿಕಿತ್ಸೆ ಇಲ್ಲದೆ ಸೊ೦ಕಿತರು ಸಾವನ್ನಪ್ಪುತ್ತಿದ್ದಾರೆ. ರೋಗಿಯ ಜೀವ ಉಳಿಸುವರೊ೦ದಿಗೆ ಜೀವ ರಕ್ಷಿಸುವದು ಸರಕಾರದ ಜವಾಬ್ದಾರಿಯಾಗಿದೆ.

Contact Your\'s Advertisement; 9902492681

ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿಯವರು ಹಲವಾರು ಬಾರಿ ನಮ್ಮ ಕಲಬುರ್ಗಿ ನಗರಕ್ಕೆ ಭೇಟಿ ಕೊಟ್ಟು ವಿಕ್ಷಣೆ ಮಾಡುತ್ತಿರುವದು ಸ್ವಾಗತಾರ್ಹ ಆದರೂ ಕೂಡ ಪ್ರತಿ ತಾಲ್ಲೂಕು ಮಟ್ಟದಲ್ಲಿ ಆರೋಗ್ಯ ಕೇಂದ್ರದಲ್ಲಿ  ಕೋವಿಡ ಕೇಂದ್ರ ಪ್ರಾರಂಭಿಸಿ ಸರ್ಕಾರ  ಜನರ ನೆರವಿಗೆ ಬರುಬೇಕೆ೦ದು ಒತ್ತಾಯಿಸುತ್ತಾ, ಜೊತೆಗೆ ನಗರದಲ್ಲಿರುವ ಹಲವಾರು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಸರಿಯಾದ ಚಿಕಿತ್ಸೆ ನೀಡುವಂತಾಗಬೇಕು.

ಇನ್ನೂ ಅತೀ ತೀವ್ರ ಗತಿಯಿಂದ ಹರಡುತ್ತಿರುವ ಸೋಂಕು ತಡೆಗಟ್ಟಲು ಪ್ರಯತ್ನ ಮಾಡಬೇಕು. ಹಳ್ಳಿಹಳ್ಳಿಗಳಲ್ಲಿ ಹರಡುತ್ತಿರುವ ಸೋಂಕು ತಡೆಗಟ್ಟಬೇಕು. ಬಡ ಕೂಲಿ ಕಾರ್ಮಿಕರ  ಕುಟುಂಬದ ನಿರ್ವಹಣೆಗಾಗಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂ. ಗಳಂತೆ  ಪರಿಹಾರ ಧನ ನೀಡಬೇಕು.  ಪ್ರತಿಯೊಂದು ಕೋವಿಡ ಆಸ್ಪತ್ರೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ರೋಗಿಯ ಸಂಬಂಧಿಕರಿಗೆ ಪಾರದರ್ಶಕವಾಗಿ ನೋಡುವ ಹಾಗೆ ಮತ್ತು ರೋಗಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಎಐವೈಎಫ್ ಜಿಲ್ಲಾಧ್ಯಕ್ಷ ಹಣಮಂತರಾಯ ಅಟ್ಟೂರ, ಅಲಿಸಾಬ್ ಸಿಂದಗಿ, ರಘುನಂದನ ಕುಲಕರ್ಣಿ, ಸುರೇಶ ಮಸಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here