ಕಲಬುರಗಿ: ವಿಜಯಪೂರ ಜಿಲ್ಲೆಯ ಬಸವನ ಭಾಗೆವಾಡಿ ತಾಲೂಕಿನ ಕುದರಿಸಾಲೆವಾಡಿ ಗ್ರಾಮದ ಪರಿಶಿಷ್ಠ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ವೆಸಗಿ ಕೊಲೆಗಡುಕರಿಗೆ ಎನ್‌ಕೌಂಟರ್ ಮಾಡಿಸಿ ಮತೃರ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರವನ್ನು ನೀಡಿ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡುಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಟೋಕರೆ ಕೋಲಿ, ಕಬ್ಬಲಿಗ ಬುಡಕಟ್ಟು ಪಂಗಡಗಳ ಸುಧಾರಣಾ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿಲಾಯಿತು.
ಭಾರತ ದೇಶಕ್ಕೆ ಸ್ವತಂತ್ರ ಸಿಕ್ಕಿ ೭೩ ವರ್ಷಗಳು ಗತಿಸಿದರು ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ದಲಿತ ಮಹಿಳೆಯರ ಕೊಲೆ ಅತ್ಯಾಚಾರ ಸಾಮಾಜಿಕ ಬಹಿಷ್ಕಾರಗಳಂತಹ ಹೀನ ಕೃತ್ಯಗಳು ದಿನನಿತ್ಯ ನಡೆಯುತ್ತಿವೆ. ಇದನ್ನು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ, ನಮ್ಮ ಕರ್ನಾಟಕ ರಾಜ್ಯದ ಒಂದಲ್ಲ ಒಂದು ಜಿಲ್ಲೆ, ತಾಲೂಕ ಗ್ರಾಮಗಳಲ್ಲಿ ಪ್ರತಿನಿತ್ಯ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಕೊಲೆ, ಇಂತಹ ಹೀನ ಕೃತ್ಯಗಳು ನಡೆಯುತ್ತಲೇ ಇವೆ. ಇದನ್ನು ನೋಡಿ ಸರ್ಕಾರ ಕಟ್ಟು ಮುಚ್ಚಿ ಕುಳಿತುಕೊಂಡಿದೆ, ಇಂತಹ ಹೀತ ಕೃತ್ಯಗಳನ್ನು ಮಾಡುವವ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಕರ್ನಾಟಕ ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ಬಲತ್ಕಾರ ಮಾಡಿ ಕೊಲೆ ಮಾಡಿದರೆ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸಿಎಂ ಅವರಿಗೆ ಒತ್ತಾಯಿಸಲಾಯಿತು.
ಅತ್ಯಾಚಾರ ಮಾಡಿ, ಕೊಲೆ ಮಾಡಿದ ಆರೋಪಿಗಳಿಗೆ ಎನ್‌ಕೌಂಟರ್ ಮಾಡಿಸಿ, ಮೃತರ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಸರ್ಕಾರಿ ನೌಕರಿ ಕೊಡಬೇಕು. ಮೃತರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಸಮಿತಿಯು ಒತ್ತಾಯಿಸುತ್ತದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್.ಜಮಾದಾರ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ರಾಮಲಿಂಗ ನಾಟಿಕಾರ, ಪ್ರಧಾನ ಕಾರ್ಯದಶಿ ಅಂಬಣ್ಣ ನರಗೊಧಿ, ಕಾರ್ಯದರ್ಶಿ ಶಿವಕುಮಾರ ಕಿರಣಗಿ, ಸಹ. ಕಾರ್ಯದರ್ಶಿ ಮೌನೇಶ ತಿಂಥಣಿ, ಖಜಾಂಚಿ ಮಲ್ಲಿಕಾರ್ಜುನ್ ಗುಡಬಾ,ಪಿಂಟು ಜಮಾದಾರ, ಸಲಹೆಗಾರ ಅಮೃತ ಡಿಗ್ಗೆ, ಸದಸ್ಯ ವೈಜನಾಥ ಕಟ್ಟಳ್ಳಿ ಉಪಸ್ಥಿತರಿದ್ದರು.