ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರ ನೀಡುವಂತೆ ಸಿಎಂಗೆ ಮನವಿ

0
24

ಕಲಬುರಗಿ: ಕರೋನಾ ಮಹಾಮಾರಿಯಿಂದಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಜೀವನವನ್ನು ನಡೆಸುವುದು ಹಾಗೂ ಉಳಿಸಿಕೊಳ್ಳುದಕ್ಕೆ ಬಹಳ ಕಷ್ಠವಾಗುತ್ತಿದ್ದ ಆದ್ದರಿಂದ ಸರಕಾರವು ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರವನ್ನು ನೀಡಬೇಕೆಂದು ಬೀದಿ ಬದಿ ವ್ಯಾಪಾರಿಗಳ ಸಮಿತಿ ಕಲಬುರಗಿ ಉತ್ತರ ವಲಯದ ಚುನಾಯಿತ ಸದಸ್ಯ ಅಬ್ದುಲ್ ಹಮೀದ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಕರೋನಾ ಮಹಾಮಾರಿಯಲ್ಲಿ ಲಾಕ್‌ಡೌನ್ ಹಾಗೂ ಇನ್ನಿತಗರ ಸಮಸ್ಯೆಯಿಂದ ಇಡಿ ರಾಜ್ಯದಲ್ಲಿ ಬೀದಿ ವ್ಯಾಪಾರಿಗಳ ವ್ಯಾಪಾರ ಹಾಗೂ ಜೀವನ ನಿರ್ವಹಣೆ ಕಷ್ಟದಲ್ಲಿ ಬಿದ್ದಿದ್ದೆ. ಅದೇ ರೀತಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕೂಡ ಬೀದಿ ವ್ಯಾಪಾರಿಗಳಿಗೆ ತುಂಬಾನೆ ಸಮಸ್ಯೆ ಉಂಟಾಗಿರುತ್ತದೆ. ಕಳೆದ ವರ್ಷದಿಂದ ಬೀದಿ ವ್ಯಾಪಾರಿಗಳಿಗೆ ಸರಕಾರದಿಂದ ಯಾವುದೇ ಪರಿಹಾರ ಬಂದಿರುವುದಿಲ್ಲ.

Contact Your\'s Advertisement; 9902492681

ಆದರೆ ಆಟೋ ರಿಕ್ಷಾ ಚಾಲಕರು ಹಾಘೂ ಅನ್ಯ ಕೂಲಿ ಕಾರ್ಮಿಕರಿಗೆ ಪರಿಹಾರ ನೀಡಲಾಗಿದೆ. ಸರಕಾರದಿಂದ ಬೀದಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ಪರಿಹಾರ ನೀಡಿರುವುದಿಲ್ಲ. ಲಾಕ್‌ಡೌನ್ ಸಮಯದಲ್ಲಿ ಬೀದಿ ವ್ಯಾಪಾರಿಗಳ ಬದಕು ಕಷ್ಠದಲ್ಲಿ ನಿರ್ವಹಣೆಯಾಗುತ್ತಿದೆ. ಆದ್ದರಿಂದ ಬೀದಿ ವ್ಯಾಪಾರಿಗಳಿಗೆ ಅತೀ ಶೀಘ್ರದಲ್ಲಿ ಪರಿಹಾರದ ಮೂಲಕ ಬೀದಿ ವ್ಯಾಪಾರಿಗಳ ಕುಟುಂಬಳಿಗೆ ಸಹಾಯವನ್ನು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here