ಶಹಾಬಾದ: ಭಗೀರಥ ಜಯಂತಿ

0
61

ಶಹಾಬಾದ: ಕನಕದಾಸರು ತಮ್ಮ ಭಕ್ತಿಯಿಂದ ಶ್ರೀ ಕೃಷ್ಣನನ್ನೇ ತನ್ನತ್ತ ತಿರುವಂತೆ ಮಾಡಿದರೇ, ಭಗೀರಥ ಮಹರ್ಷಿಯವರು ತಮ್ಮ ತಪ್ಪಸ್ಸಿನಿಂದ ಶಿವನ ಮುಡಿಯಿಂದ ಗಂಗೆಯನ್ನು ಧರೆಗಿಳಿಸಿ ಸಕಲ ಜೀವರಾಶಿಗಳಿಗೆ ಜೀವದಾನ ಕೊಟ್ಟ ಮಹಾನ್ ಪುರುಷ ಎಂದು ನಗರಸಭೆಯ ಎಇಇ ಪುರುಷೋತ್ತಮ ಹೇಳಿದರು.

ಅವರು ಮಂಗಳವಾರ ನಗರಸಭೆ ವತಿಯಿಂದ ನಗರಸಭೆಯ ಕಚೇರಿಯಲ್ಲಿ ಹಮ್ಮಿಕೊಂಡ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ನೀರಿನಿಂದಲೇ ಜೀವಿಗಳ ಉಗಮ ಮತ್ತು ಭೂಮಿಯ ಮೇಲೆ ಸಕಲ ಜೀವರಾಶಿಗಳು ನಿರೇ ಜೀವ. ನೀರಿಲ್ಲದೇ ಇದ್ದರೇ ಬದುಕುವುದು ಅಸಾಧ್ಯ.ಆದರೆ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡಿ ಗಂಗೆಯನ್ನೇ ಧರೆಗೆ ಬರುವಂತೆ ಮಾಡಿದವರು ಭಗೀರಥ ಮಹರ್ಷಿ. ಆದರೆ ಇಂದು ದೇಶದಲ್ಲಿ ಬರಗಾಲ ಆವರಿಸಿದೆ. ಕುಡಿಯಲು ನೀರು ಸಿಗುತ್ತಿಲ್ಲ.

ಅಂತರ್ಜಲ ಪಾತಾಳಕ್ಕೆ ತಲುಪಿದೆ. ಪಶು, ಪಕ್ಷಿಗಳು ವೇದನೆ ಯಾರು ಕೇಳದಂತಾಗಿದೆ.ಆದ್ದರಿಂದ ಪ್ರತಿಯೊಬ್ಬರೂ ನಮ್ಮ ಪರಿಸರವನ್ನು ಕಾಪಾಡಬೇಕಿದೆ. ಪ್ರತಿ ವ್ಯಕ್ತಿ ಗಿಡ, ಮರಗಳನ್ನು ನೆಟ್ಟು ಮಳೆ ಬರುವಂತೆ ಮಾಡಬೇಕಿದೆ. ನೀರಿನ ಮಹತ್ವವನ್ನು ಅರಿತು, ಹಿತ-ಮಿತವಾಗಿ ಬಳಸಬೇಕು. ನೀರಿನ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕ್ರಮ ಕೈಗೊಳಬೇಕಾಗಿದೆ ಎಂದರು.

ಉಪ್ಪಾರ ಸಮಾಜದ ತಾಲೂಕಾಧ್ಯಕ್ಷ ವಸಂತಕುಮಾರ ಚೂರಿ ಮಾತನಾಡಿ, ಭಗೀರಥ ಮಹರ್ಷಿ ಅವರ ಬದ್ಧತೆ ಇಂದಿಗೂ ಸ್ಮರಿಸುವಂತಿದೆ. ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಭಗೀರಥ ಅವರ ಹಾಗೇ ತಪಸ್ಸು ಮಾಡಿದರೇ ಅಸಾಧ್ಯವಾದುದು ಸಾಧ್ಯವಾಗುತ್ತದೆ ಎಂದರು.

ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಉಪ್ಪಾರ ಸಮಾಜದ ತಾಲೂಕಾ ಉಪಾಧ್ಯಕ್ಷ ಹಣಮಂತ ಶಾಲಿ, ನಗರಸಭೆಯ ಕಚೇರಿ ವ್ಯವಸ್ಥಾಪಕ ಶಂಕರ ಇಂಜಗನೇರಿ, ಎಇಇ ಮುಜಾಮಿಲ್ ಅಲಾಮ, ನಾರಾಯಣರೆಡ್ಡಿ ಸೇರಿದಂತೆ ಇತರರು ಇದ್ದರು.
ಚಿತ್ರ ಶೀರ್ಷಿಕೆ
18ಎಸ್‍ಬಿಡಿ2
ಶಹಾಬಾದ : ನಗರಸಭೆಯ ಕಚೇರಿಯಲ್ಲಿ ಮಂಗಳವಾರ ಭಗೀರಥ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here