ಕರೋನಾ ಎಂಬ ಹೆಮ್ಮಾರಿ ಇಂದ್ದಾಗಿ ಯಾರದೋ ತಂದೆ, ತಾಯಿ, ಅಣ್ಣಾ, ತಮ್ಮ, ಅಕ್ಕಾ, ತಂಗಿ ಮನೆಗೆ ಆಧಾರ ಸ್ತಂಬವಾಗಿರುವಂತ ಹಲವರು ಮೃತಪಟ್ಟು ಅವರ ಕುಟುಂಬಗಳು ಬೀದಿಪಾಲಾಗಿವೇ. ಈ ಕರೋನಾ ಎಂಬ ಮಾರಿ ಸಿಕ್ಕ, ಸಿಕ್ಕವರನ್ನು ತನ್ನ ಕಪಿಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಸಾವಿನ ಮನೆಗೆ ದೂಡುತ್ತಿದೆ. ಈ ಹೆಮ್ಮಾರಿಯ ರಣಕೇಕೆಗೆ ಜನರು ನಲುಗಿ ಹೋಗಿದ್ದಾರೆ.
ಆತ್ಮೀಯರು, ಸಂಬಂಧಿಗಳು ಈಗೆ ಹಲವರ ಸರಣಿ ಸಾವಿನ ಸುದ್ಧಿ ಬರ ಸಿಡಿಲಿನಂತೆ ಕಿವಿಗೆ ಅಪ್ಪಳಿಸುತ್ತಿರಲು ಮನುಷ್ಯ ಕುಗ್ಗಿಹೋಗುತ್ತಿದ್ದಾನೆ. ಇದರ ಮಧ್ಯ ಕರೋನಾ ಪಾಸಿಟಿವ್ ಆಗಿ ಮೃತರಾದ ಮನೆಯವರನ್ನು ನೋಡಿದ ಕೂಡಲೇ ಅವರನ್ನ ಅಮಾನವಿಯತೆಯಿಂದ ವರ್ತಿಸುತ್ತಿರುವುದು ಮಾತ್ರ ದುರಾದೃಷ್ಟಕರ ಸಂಗತಿ. ಮಾನವಿಯತೆಯನ್ನು ಮರೆತು ಅವರನ್ನು ಅಸ್ಪೃಶ್ಯರಂತೆ ಕಾಣುತ್ತಿರುವುದು ದುರಂತವೇ ಸರಿ, ಇದರಿಂದಾಗಿ ಹಲವರು ಮತ್ತಷ್ಡು ಕುಗ್ಗಿ ಹೋಗುತ್ತಿದ್ದಾರೆ.
ಅಂತಹವರಿಗೆ ದೈರ್ಯ ತುಂಬುವ ಕೆಲಸ ಮಾಡುವುದನ್ನು ಬಿಟ್ಟು ಟೀಕೆ ಟಿಪ್ಪಣಿ ಮಾಡುತ್ತಿರುವುದು ವಿಷಾದದ ಸಂಗತಿ. ಇಂತಹ ಕೆಲವು ಘಟನೆಗಳನ್ನು ಕೇಳಿದಾಗ ಮನಸ್ಸಿಗೆ ತುಂಬಾ ನೋವು ಆಗುತ್ತದೆ. ರೋಗ-ಮರಣ-ಜಗಳ ಇವುಗಳು ಹೇಳಿ ಕೇಳಿ ಇವರಿಗೆ, ಇಂತಹವರಿಗೆ ಬರಬೇಕು ಅಂತಹ ಏನು ಇಲ್ಲ, ಯಾವಾಗಬೇಕಾದರು ಯಾರಿಗೆಬೇಕಾದರು ಬರಬಹುದು. ಏಕೆಂದರೆ ಹುಟ್ಟು ಖಚಿತ ಸಾವು ನಿಶ್ಚಿತ ಇದನ್ನು ಗೊತ್ತಿದ್ದು ಮನುಜ ಇಲ್ಲೇ ಖಾಯಂ ಆಗಿ ಗೊಟಾ ಹೊಡಕೊಂಡು ಕುಂದುರುತಿವಿ ಅನ್ನುವಂಗ್ ಮಾಡತ್ತಾರ. ಇದಕ್ಕೆನೇ ಇರಬೇಕು ೧೨ನೇ ಶತಮಾನದಲ್ಲಿ ಆಗಿ ಹೋದ ಶರಣ ಮುಳಬಾವಿಯ ಸೋಮಣ್ಣ ತನ್ನ ಒಂದು ವಚನದಲ್ಲಿ ಈಗೆ ಹೇಳುತ್ತಾನೆ.
ಆಗಿಲ್ಲದ ಸಿರಿ,
ಆಯುಷ್ಯವಿಲ್ಲದ ಬದುಕು.
ಸುಖವಿಲ್ಲದ ಸಂಸಾರ.
ಎಳತಟೆಗೊಂಬ ಕಾಯದ ಸಂಘ
ಬಳಲಿಸುವ ಜೀವಭಾವ.
ಇವರ ಕಳವಳವಳಿದಲ್ಲದೆ ಮಳುಬಾವಿಯ ಸೋಮನ ತಿಳಿಯಬಾರದು.
ನಮ್ಮನು ನಾವು ಹೇಗೆ ಧೈರ್ಯ ತಂದು ಕೊಳ್ಳಬೇಕು ಎಂದು ಅಕ್ಕನ ಈ ವಚನ ಮತ್ತೆ ಮತ್ತೆ ನನಪಾಗುತ್ತೆ.
ಹೆದರದಿರು ಮನವೆ
ಬೆದರದಿರು ತನುವೆ
ನಿಜವನರಿತು ನಿಶ್ಚಿಂತನಾಗಿರು. ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ
ಎಲವದಮರನ ಇಡುವರೊಬ್ಬರ ಕಾಣೆ. ಭಕ್ತಿಯುಳ್ಳವರ ಬೈವರೊಂದು ಕೋಟಿ
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ. ನಿಮ್ಮ ಶರಣರ ನುಡಿಯೆ ಎನಗೆ ಗತಿ ಸೋಪಾನ
*ಚೆನ್ನಮಲ್ಲಿಕಾರ್ಜುನಾ.