18 ವರ್ಷ ಮೇಲ್ಪಟ್ಟ ದಿವ್ಯಾಂಗರಿಗೆ ಲಸಿಕೆ ನೀಡಲು ಆಗ್ರಹ

0
20

ಕಲಬುರಗಿ: ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ವಿಶೇಷಚೆತನರಿಗೆ ಮೊದಲ ಆದ್ಯತೆ ನೀಡಬೇಕು. ಅವರು ಲಸಿಕೆಗಾಗಿ ಕಾಯುವಂತಾಗಬಾರದು. ಲಸಿಕಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗಾಲಿ ಕುರ್ಚಿಯ ವ್ಯವಸ್ಥೆ ಮಾಡಬೇಕು.ಅಂಗವಿಕಲರ ಹಕ್ಕುಗಳ ಕಾಯ್ದೆ 2016ರ ಸೆಕ್ಷನ್ 25(1)(ಸಿ) ಪ್ರಕಾರ ಅಂಗವಿಕಲರಿಗೆ ಸೇವೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಬೇಕೆಂದು ಕಡ್ಡಾಯಗೊಳಿಸಿರುತ್ತದೆ.

ಕೊರೋನಾ ವೈರಸ್ ಆತಂಕ ಹೆಚ್ಚಾಗಿದೆ. ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಕರೋನಾ ರೋಗವನ್ನು ನಿಯಂತ್ರಿಸುವದರ ಜೋತೆಗೆ ಕೋವಿಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಎಲ್ಲಾ ದಿವ್ಯಾಂಗರಿಗೆ ಮತ್ತು ಅವರ ಆರೈಕೆದಾರರಿಗೆ ಕಡ್ಡಾಯವಾಗಿ ಆದ್ಯತೆಯ ಅನುಸಾರ ನೀಡಬೇಕೆಂದು ಡಿಸೆಬಲ್ಡ ಹೆಲ್ಪಲೈನ್ ‌ಪೌಂಡೆಶನನ‌ ರಾಜ್ಯ ಸಂಯೋಜಕ ‌ಬಸವರಾಜ ಹೆಳವರ ಯಾಳಗಿ‌ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here