ಬಿಜಾಪುರ: ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮಸ್ಥರು ಮತ್ತು ರೈತರು ಗೃಹ ಸಚಿವ ಡಾ. ಎಂ ಬಿ ಪಾಟೀಲ ಅವರಿಗೆ ಭೇಟಿಯಾಗಿ ಗ್ರಾಮದ ಕೆರೆಗೆ ನೀರನ್ನು ಹರಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು.
ಜಿಲ್ಲೆಯ ಸಚಿವರ ಸ್ವಗೃಹಕ್ಕೆ ತೆರಳಿ ಮನವಿ ಸಲ್ಲಿದ ನಂತರ ಸುದ್ದಿಗಾರೊಂದಿಗೆ ಮನವಿ ಕುರಿತು ಸಚಿವರು ಸ್ಪಂದಿಸಿ ಶೀಘ್ರದಲ್ಲಿಯೇ ಅಥರ್ಗಾ ಮಾತ್ರವಲ್ಲ ಜಿಲ್ಲೆಯಲ್ಲಿ ಇರುವ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸುವ ಮತ್ತು ಕಾಯಕಲ್ಪ ಮಾಡುವ ಕೆಲಸ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ.