ಜಿಮ್ಸ್‌ನ 500 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ

0
24

ಕಲಬುರಗಿ: ಸೌಮ್ಯ ಸ್ವಭಾವ ಮತ್ತು ತೀವ್ರತರವಲ್ಲದ ಕೋವಿಡ್ ಸೋಂಕಿತರಿಗೆ ಚಿಕೆತ್ಸೆ ನೀಡಲು ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್-ಜಿಮ್ಸ್ ಆಸ್ಪತ್ರೆ ಸರ್ಕಲ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ೫೦೦ ಹಾಸಿಗೆ ಸಾಮರ್ಥ್ಯದ ವಸತಿ ನಿಲಯವನ್ನು ಜಿಮ್ಸ್ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದ್ದು, ಶುಕ್ರವಾರದಿಂದಲೆ ಕಾರ್ಯಾರಂಭ ಮಾಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ಅವರು ತಿಳಿಸಿದರು.

ಶುಕ್ರವಾರ ಅವರು ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಮಾತನಾಡಿದರು. ೫೦೦ ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸದ್ಯ ೫೦ ಬೆಡ್ ಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ ಅದಕ್ಕನುಗುಣವಾಗಿ ಹಾಸಿಗೆಯನ್ನು ಹೆಚ್ಚಿಸಲಾಗುವುದು ಎಂದರು.

Contact Your\'s Advertisement; 9902492681

ಕೋವಿಡ್ ಕೇರ್ ಸೆಂಟರ್ ನಲ್ಲಿ ೩೬ ಆಕ್ಸಿಜನ್ ಕನ್ಸನ್‌ಟ್ರೇಟರ್‌ಗಳಿದ್ದು, ಉಸಿರಾಟ ಸಮಸ್ಯೆ ಇರುವ ರೋಗಿಗಳಿಗೆ ಇದು ನೆರವಾಗಲಿದೆ. ಓರ್ವ ಫಾರ್ಮಾಸಿಸ್ಟ್ ಸಹ ನಿಯೋಜಿಸಿದೆ. ಅಗತ್ಯ ಔ?ಧಿಗಳು ಸ್ಥಳದಲ್ಲಿಯೆ ಲಭ್ಯವಿರಲಿವೆ ಎಂದರು.

ಕೋವಿಡ್ ಸೋಂಕಿತರಿಗೆ ದಿನದ ೨೪ ಗಂಟೆ ಚಿಕಿತ್ಸೆ ನೀಡಲು ೩ ಪಾಳಿಯಲ್ಲಿ ಒಟ್ಟು ೩ ಎಂ.ಬಿ.ಬಿ.ಎಸ್ ವೈದ್ಯರು, ೬ ಸ್ಟಾಫ್ ನರ್ಸ್ ಗಳು, ೬ ಗ್ರೂಪ್ ಡಿ ನೌಕರರನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತದಿಂದಲೆ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಆಂಬುಲೆನ್ಸ್ ಸಹ ಲಭ್ಯವಿರಲಿದೆ ಎಂದು ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್ ಅವರು ವಿವರಿಸಿದರು.

ಇದೇ ವೇಳೆ ಆಕ್ಸಿಜನ್ ಕನ್ಸನ್ ಟ್ರೇಟರ್‌ಗಳು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಡಿಹೆಚ್‌ಓ ಡಾ.ಶರಣಬಸಪ್ಪ ಗಣಜಲಖೇಡ್ ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಹಾಗೂ ಕಲಬುರಗಿ ತಾಲೂಕಾ ಅರೋಗ್ಯಧಿಕಾರಿ ಡಾ. ಮಾರುತಿ ಕಾಂಬಳೆ ಇದ್ದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here