ಸೇಡಂ: ಸಾಧನೆಗೆ ಸಾವಿರ ಮಾರ್ಗಗಳು ಎನ್ನುವಂತೆ ಕಿತ್ತು ತಿನ್ನ್ನುವ ಬಡತನವಿದ್ದರೂ ನಿಷ್ಠೆ ಮತ್ತು ಪ್ರಾಮಾಣಿಕಂದ ಕೂಡಿದ ಅಧ್ಯಯನವು ಇಂದು ಬಂಗಾರ ಪದಕ ಪಡೆಯುವ ಮೂಲಕ ತನ್ನೆಲ್ಲಾ ಕಷ್ಟವನ್ನು ಮೀರಿ ಬೆಳೆದ ಯುವಕ ಸೇಡಂ ತಾಲೂಕಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಥಮ ಬಂಗಾರ ಪದಕ ತರುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾನೆ.
ಸೇಡಂ ತಾಲೂಕಿನ ಬಸವರಾಜ ಮ್ಲಕಾರ್ಜುನ ಕೊಡಸಾ ಎಂಬ ಯುವಕ ರಾಯಚೂರ ಕೃಷಿ ವಿಶ್ವವಿದ್ಯಾಲಯದಲ್ಲಿ ತನ್ನ ಸ್ನಾತಕೊತ್ತರ ಪದವಿಯಲ್ಲಿ ಸಸ್ಯ ರೋಗಶಾಸ್ತ್ರ ವಿಷಯದಲ್ಲಿ ಸಂಶೋಧನೆ ಅಧ್ಯಯನ ನಡೆಸಿ ಶೇ. ೯.೧ ಗ್ರೇಡ್ ಪಡೆಯುವ ಮೂಲಕ ರಾಯಚೂರು ವಿವಿ ೯ನೇ ಘಟಿಕೋತ್ಸವದಲ್ಲಿ ಸ್ವರ್ಣಪದಕ ಪಡೆಯುವ ಮೂಲಕ ಬಡ ತಾಯಿ ಮತ್ತು ಸಹೋದರ ಸೇರಿದಂತೆ ತನ್ನ ಕುಟುಂಬಕ್ಕೆ ಧನ್ಯತಾ ಭಾವ ಮೂಡುವಂತೆ ಮಾಡಿದ್ದಾನೆ ಈ ಬಸವರಾಜ.
೭ ವರ್ಷಗಳಿಂದೆ ತಮ್ಮ ಕುಟುಂಬದ ಆಧಾರಸ್ಥಂಬವಾದ ತಂದೆಯನ್ನು ಕಳೆದುಕೊಳ್ಳುವ ಮೂಲಕ ಇಡೀ ಕುಟುಂಬವೇ ಕಷ್ಟಗಳ ಸರಮಾಲೆಯನ್ನು ಎದುರಿಸಿದರು, ಆದರೆ ತಂದೆ ಇಲ್ಲದ ನೋವು ಹಾಗೂ ಬಡತನದ ಬಾದೆ ತಮ್ಮ ಮಗನ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು ಎಂಬ ಚಲದೊಂದಿಗೆ ತಾಯಿ ಮತ್ತು ಸಹೋದರ ಬಾಲರಾಜ್ ಕೊಡಸಾ ಸಾಕಷ್ಟು ಕಷ್ಟಪಟ್ಟು ದುಡಿದು ಅಧ್ಯಯನಕ್ಕೆ ಅಡ್ಡಿಯಾಗದಂತೆ ಪ್ರೋತ್ಸಾಹ ನೀಡಿರುವುದರಿಂದಲೇ ಸ್ವಣ ಪದಕ ಸಾಧನೆಗೆ ಸಾಧ್ಯವಾಯಿತೆಂದು ಬಸವರಾಜ ಹೇಳಿದ್ದಾರೆ.
ತಾಯಿ ಮತ್ತು ಮತ್ತು ಸಹೋದರನ ಶ್ರಮಕ್ಕೆ ತಕ್ಕಂತೆ ಸಾಧಕ ಬಸವರಾಜ ಅವರು ಡಾ. ವೈ.ಎಸ್. ಅಮರೇಶ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಕೃಷಿ ಮಂತ್ರಿ ಶಿವಶಂಕರ ರೆಡ್ಡಿ ಹಾಗೂ ಕುಲಪತಿ ಡಾ. ಕೆ.ಎನ್. ಕಟ್ಟಿಮನಿ ಹಾಗೂ ಐಎಎಸ್ ಅಧಿಕಾರಿ ಅಶೋಕ ದಳವಾಯಿಯವರಿಂದ ಪದಕ ಮತ್ತು ಪದವಿ ಪಡೆಯುವ ಸನ್ನಿವೇಶ ಕಣ್ತುಂಬಿಸಿಕೊಂಡ ಕುಟುಂಬಸ್ಥರ ಕಣ್ಣು ಆನಂದ ಭಾಷ್ಟ ಮಿಡಿಯುವ ಮೂಲಕ ಸಾರ್ಥಕತೆ ಮೆರೆದಿದ್ದಾನೆ. ಬಸವರಾಜ ಅವರ ಸಾಧನೆಗೆ ವಿವಿಯ ಉಪನ್ಯಾಸಕ ಸಿಬ್ಬಂಧಿ ಹಾಗೂ ಬಂಧು ಮಿತ್ರರು ಶುಭಕೋರಿದ್ದಾರೆ.