ಶಹಾಬಾದ:ನಗರದಲ್ಲಿ ಕೊರೊನಾ ಹರಡುತ್ತಿರುವುದರಿಂದ ನಗರದ ಎಲ್ಲಾ ವಾರ್ಡಗಳಿಗೆ ಹಾಗೂ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಸ್ಯಾನಿಟೈಸರ್ ಮಾಡಬೇಕೆಂದು ಆಗ್ರಹಿಸಿ ಮಜಲಿಸ್-ಇ-ಕಿದಮತ್-ಇ ಮಿಲತ್ ಸಂಘಟನೆ ವತಿಯಿಂದ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಜನರಿಗೆ ಸೊಂಕು ತಗುಲಿದೆ.ಇದರಿಂದ ಕೆಲವು ಜನರು ಗುಣಮುಖರಾಗಿದ್ದರೇ, ಕೆಲವು ಜನರು ಸಾವನಪ್ಪಿದ್ದಾರೆ.ಕಳೆದ ತಿಂಗಳಲ್ಲಿ ಆರೋಗ್ಯ ನಿರೀಕ್ಷಕರು ಸರಿಯಾಗಿ ಸ್ಯಾನಿಟೈಜರ್ ಮಾಡಿರುವುದಿಲ್ಲ.ಆದ್ದರಿಂದ ಎಲ್ಲಾ ಪ್ರದೇಶಗಳಲ್ಲಿ ಸ್ಯಾನಿಟೈಜರ್ ಮಾಡಬೇಕು.ಅಲ್ಲದೇ ನಗರದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಈಗಾಗಲೇ ಎಲ್ಲಾ ವಾರ್ಡಗಳಿಗೆ ಸ್ಯಾನಿಟೈಜರ್ ಮಾಡಲಾಗಿದೆ. ಅಲ್ಲದೇಪ್ರತಿ ದಿನ ಸ್ವಚ್ಛತೆ ಕಾಪಾಡಲು ನಗರಸಭೆಯ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.ಅಲ್ಲದೇ ತಮ್ಮ ಒತ್ತಾಯದ ಮೇರೆಗೆ ಮತ್ತೆ ಸ್ಯಾನಿಟೈಜರ್ ಮಾಡಲು ಕ್ರಮಕೈಗೊಳ್ಳುತ್ತೆನೆ ಎಂದು ಹೇಳಿದರು.
ಮಜಲಿಸ್-ಇ-ಕಿದಮತ್-ಇ ಮಿಲತ್ ಸಂಘಟನೆಯ ಸದಸ್ಯರಾದ ಸುಭಾನಖಾನ ನಸೀರಖಾನ, ಸಂಚಾಲಕ ಮಹ್ಮದ್ ಮಸ್ತಾನ, ಮಹ್ಮದ್ ಇಮ್ರಾನ್ ಹಾಗೂ ನೀರಜ ಶರ್ಮಾ ಸೇರಿದಂತೆ ಇತರರು ಇದ್ದರು.