ದಿಗ್ಗಾಂವ ಗ್ರಾಮದಲ್ಲಿ ಸ್ಯಾನಿಟೇಜ್ ಸಿಂಪಡಿಣೆ ಹಾಗೂ ಮಾಸ್ಕ್ ವಿತರಣೆ

0
121

ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ಗ್ರಾಮದಲ್ಲೆಡೆ ಸ್ಯಾನಿಟೈಜರ್ ಸಿಂಪಡಣೆ ಹಾಗೂ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮವನ್ನು ತಾಲೂಕ ಯುವ ಮೋರ್ಚಾದ ಅಧ್ಯಕ್ಷರಾದ ಶಿವಕುಮಾರ ಸುಣಗಾರ್ ಹಾಗೂ ಮುಖಂಡರಾದ ವಿಶ್ವನಾಥಗೌಡ ಪಾಟೀಲ್ ಅಲ್ಲೂರ್ ಅವರು ಚಾಲನೆ ನೀಡಿದರು.

ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಹತ್ತಿರ ಚಾಲನೆ ನೀಡಲಾಯಿತು ನಂತರ ಗ್ರಾಮದ ಪ್ರಮುಮ ಬೀದಿಗಳಲ್ಲಿ,ಜನರು ಹೆಚ್ಚು ಸಂಚಾರ ಮಾಡುವ ರಸ್ತೆಯಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡಿ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾದ ಅಧ್ಯಕ್ಷ ಶಿವಕುಮಾರ ಸುಣಗಾರ್ ಅವರು ರಾಜ್ಯದಲ್ಲಿ ಕೋವಿಡ್-19ನ ಅಲೆ ಹೆಚ್ಚಾಗಿರುವುತ್ತಿದ್ದರಿಂದ ಯುವ ಮೋರ್ಚಾದ ವತಿಯಿಂದ ತಾಲೂಕಿನ ಎಲ್ಲಾ ಜಿಲ್ಲಾ ಪಂಚಾಯತ್ ಗಳಲ್ಲಿ ಸ್ಯಾನಿಟೈಜರ್ ಸಿಂಪಡಿಣೆ ಮಾಡುವ ಪ್ರಕ್ರಿಯೆಗೇ ಇಂದು ಚಾಲನೆ ನೀಡಲಾಗಿದೆ. ಪ್ರಥಮವಾಗಿ ನಾವು ದಿಗ್ಗಾಂವ ಗ್ರಾಮದ ಮೂಲಕ ಚಾಲನೆ ಮಾಡುತ್ತಿದ್ದೇವೆ ಜನರು ಕರೋನಾದ ಬಗ್ಗೆ ಜಾಗ್ರತಿ ವಹಿಸಬೇಕು ಎಂದು ಹೇಳಿದರು.

ಅರ್ಧಕ್ಕೆ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ ಚವ್ಹಾಣ್ ಮಾತನಾಡಿ ಕೋವಿಡ್-19 ವೈರಸ್ ನಿಂದಾಗಿ ಜನರಿಗೆ ಬಹಳ ತೊಂದರ ಅನುಭವಿಸಿತ್ತಿದ್ದಾರೆ.ಸಂಕಷ್ಟದಲ್ಲಿ ಇರುವ ಜನರು ಭಯಪಡುವ ಅವಶ್ಯಕತೆ ಇಲ್ಲಾ ಸರ್ಕಾರ ಅವರ ಬೆನ್ನಿಗೆ ಯಾವಾಗಲೂ ಇದೆ.ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕು.ಕರೋನಾ ನಿಯಂತ್ರಣಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಯುವ ಮುಖಂಡರಾದ ವಿಶ್ವನಾಥಗೌಡ ಪಾಟೀಲ್ ಅಲ್ಲೂರ್ ಅವರು ಮಾತನಾಡಿ ಕರೋನಾ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಸಾರ್ವಜನಿಕರು ಪಾಲನೆ ಮಾಡಬೇಕು.ಅತಿ ತುರ್ತು ಪರಿಸ್ಥಿತಿ ಇದ್ದಾಗ ಮಾತ್ರ ಮನೆಯಿಂದ ಹೊರಗೆ ಬರಬೇಕು.ಗ್ರಾಮೀಣ ಪ್ರದೇಶದ ಜನರು ಮುಗ್ದರು ಕೋವಿಡ್-19 ಬಗ್ಗೆ ಜನರಲ್ಲಿ ಹೆಚ್ಚಿನ ತಿಳುವಳಿಕೆ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಕ್ಯಾಶ್ ಲೇಸ್ ಅಭಿಯಾನಕ್ಕೆ ಡೈಗ್ನೋಸಿಸ್ ಸೆಂಟರ್ ನಲ್ಲಿ ಇಲ್ಲ ಕಿಮ್ಮತು

ನಮ್ಮ ಗ್ರಾಮದಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.ಯುವ ಮೋರ್ಚಾದ ವತಿಯಿಂದ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಗುತ್ತದೆ.ಇದ್ದರಿಂದ ಕರೋನಾ ಅಷ್ಟೇ ಅಲ್ಲ ಇರರ ಬೇರೆ ಯಾವುದು ಸಾಂಕ್ರಾಮಿಕ ರೋಗ ಹರಡುವಿಕೆ ನಿಯಂತ್ರಣ ಮಾಡುತ್ತದೆ ಎಂದು ಯುವ ಮೋರ್ಚಾ ಉಪಾಧ್ಯಕ್ಷ ಶಂಕರ ಜಾಪುರಕರ್ ಅವರು ಹೇಳಿದರು.

ಈ ಸಂದರ್ಭದಲ್ಲಿ ಕವಿತಾ ಚವ್ಹಾಣ್,ಮಹೇಶ ಬಾಳಿ,ಬಸವಂತರಾವ ಮಾಲಿ ಪಾಟೀಲ್,ರಾಮನಾಥ ಪೊಲೀಸ್ ಪಾಟೀಲ್, ಮಲ್ಲಿಕಾರ್ಜುನ ಅವಂಟಿ,ಅಶ್ವಥ ರಾಠೋಡ, ಶಂಭುಲಿಂಗಪ್ಪಾ ಬಂಗ್ಗಿ,ಬನಶಂಕರ ಪಸರ್,ಶರಣು ಹತಗುಂದಿ,ದೇವಿರಾಜ ಬೆಣ್ಣೊರ್,ಭೀಮರಾಯ ಮತ್ತಿಮೂಡ,ಸಚಿನ ವಾಡಿ,ಮಹೇಶ ಬಟೆಗೇರಿ,ಗಿರೀಶ್ ಬೊಮನಹಳ್ಳಿ ಅವಿನಾಶ ಅರಳಿ ಮತಿತ್ತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here