ಕಲಬುರಗಿ: ಮಹಾ ಮಾರಿ ಕರೋನಾದಿಂದ ಸಂಕಷ್ಠದಲ್ಲಿರುವ ಜನರಿಗೆ ಸಹಾಯ ಮಾಡುವ ಹಾಗೂ ಸಮಾಜ ಸೇವೆ ಮಾಡುವ ಮೋಭಾವನೆ ಎಲ್ಲರಲ್ಲೂ ಬರಬೇಕು. ದೇಶದಲ್ಲಿಯೇ ಕರೋನಾದಿಂದಾಗಿ ಲಾಕ್‌ಡೌನ್ ಆದಾಗಿನಿಂದಲೂ ಬಡ ನಿರ್ಗತಿಕರು ಬಹಳಷ್ಟು ಸಂಕಷ್ಠದಲ್ಲಿ ಸಿಲುಕಿದ್ದಾರೆ ಅಂತಹ ಜನರಿಗೆ ಕೈಲಾದ ಸಹಾಯ ಮಾಡಬೇಕು ಎಂದು ವೇದಾ ಪಬ್ಲಿಕ್ ಸ್ಕೂಲ್‌ನ ಕಾರ್ಯದರ್ಶಿ ರವಿ ಎಸ್.ಮಲಶೆಟ್ಟಿ ಹೇಳಿದರು.
ವೇದಾ ಪಬ್ಲಿಕ್ ಸ್ಕೂಲ್ ವತಿಯಿಂದ ೫೦೦ ಎನ್-೯೫ ವಾಸ್ಕ್ ಹಾಗೂ ೫೦೦ ಸ್ಯಾನಿಟೈಜರ್‌ಗಳನ್ನು ಪೋಲಿಸ್ ಸಿಬ್ಬಂದಿಗಳಿಗೆ ನೀಡುವಂತೆ ನಗರದ ಪೊಲೀಸ್ ಆಯುಕ್ತರಿಗೆ ನೀಡಿ ಮಾತನಾಡುತ್ತಾ ಅವರು, ಕರೋನಾ ಮಹಾಮಾರಿಯನ್ನು ತಡೆಯಲು ಹಗಲು ರಾತ್ರಿ, ಮಳೆ, ಬಿಸಿಲು. ಛಳಿಎನ್ನದೇ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಕರೋನಾ ವಿರುದ್ಧ ಹೋರಾಡಲು ಅನುಕೂಲ ವಾಗಲಿ ಎಂದು ಸಂಸ್ಥೆ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗಳನ್ನು ನೀಡಲಾಯಿತು ಎಂದರು.
ಕಳೆದ ವರ್ಷವೂ ಸಂಸ್ಥೆಯ ವತಿಯಿಂದ ಆಹಾರದ ಪೊಟ್ಟಣಗಳನ್ನು ನೀಡಲಾಗಿತ್ತು. ಪ್ರಸ್ತುತ ವರ್ಷದಲ್ಲಿಯೂ ಮಹಾಮಾರಿ ಕರೋನಾ ತಡೆಯಲು ಹರ ಸಾಹಸ ಮಾಡುತ್ತಿರುವ ವೈದ್ಯರು, ಪೋಲಿಸ್ ಸಿಬ್ಬಂದಿ ಇವರಿಗೂ ಕೂಡ ನಮ್ಮ ಸಂಸ್ಥೆಯ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗಳನ್ನು ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರಾದ ಆರತಿ ಆರ್.ಮಲಶೆಟ್ಟಿ, ವಿಜಯಕುಮಾರ ಎ.ಪಾಟೀಲ್ ಗಾದಗಿ, ಡಾ. ಎಸ್.ಜಿ.ಮಲಶೆಟ್ಟಿ, ಶಶಿಕಾಂತ ಕೊರಳ್ಳಿ ಉಪಸ್ಥಿತರಿದ್ದರು.