ವಾಡಿ(ಗ್ರಾಮೀಣ): ಪಟ್ಟಣ ಸಮೀಪದ ನಾಲವಾರ ಗ್ರಾಮದಲ್ಲಿ ವಿವಿಧ ವಾರ್ಡ್‌ಗಳ ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ಗಬ್ಬು ದುರ್ವಾಸನೆ ಹರಡಿದೆ. ಪಂಚಾಯಿತಿ ಅಧ್ಯಕ್ಷರ ಆದೇಶದ ಮೇರೆಗೆ ಚರಂಡಿಗಳ ಹುಳೇತ್ತುವ ಕಾಮಗಾರಿ ಭರದಿಂದ ಸಾಗಿದೆ.
ಗ್ರಾಮದ ಕೋರಿ ಸಿದ್ದೇಶ್ವರಮಠದ ಪಕ್ಕದ ಚರಂಡಿ ಸೇರಿದಂತೆ ವಾರ್ಡ್ ಸಂಖ್ಯೆ ೧,೨,೩,೪ರ ಚರಂಡಿಗಳ ಸ್ವಚ್ಛತೆ ಕಾಮಗಾರಿ ನಡೆದಿದೆ.
ದಲಿತರು ವಾಸಿಸುವ ಪ್ರದೇಶದಲ್ಲಿ ಸುಮಾರು ೬೬ಲಕ್ಷ ರೂಪಾಯಿ ವೆಚ್ಚದಲ್ಲಿ ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಚರಂಡಿ ಸ್ವಚ್ಚತೆ ಕಾರ್ಯ ನಡೆದಿಲ್ಲ. ಇದರಿಂದ ದಲಿತರು ಗಬ್ಬು ದುರ್ವಾಸನೆಯಲ್ಲೇ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ನೂತನ ಅಧ್ಯಕ್ಷರ ಕಾರ್ಯವೈಕರಿ ಜನತೆಗೆ ಸಂತಸ ತಂದಿದೆ.
ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಸೌಕರ್ಯಕ್ಕೆ ಆಧ್ಯತೆ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ಸುಮಾರು ೬೦೦ ಜನರಿಗೆ ಕೆಲಸ ನೀಡಲಾಗಿದೆ. ಇದರಿಂದ ಬೆಂಗಳೂರು ಸೇರಿದಂತೆ ಇತರ ಮಹಾನಗರಗಳ ಗುಳೆ ತಪ್ಪಿದಂತಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಜಾಗಾರ್ ತಿಳಿಸಿದ್ದಾರೆ.