ಕಲಬುರಗಿ: ವಯೋ ವೃದ್ಧನ ಮೇಲೆ ಹಲ್ಲೆ ನಡೆಸಿ ದರೋಡೆ

0
198

ಕಲಬುರಗಿ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ ವಯೋ ವೃದ್ಧ ಭಿಕ್ಷುಕನ ಮೇಲೆ ಚಟಕ್ಕೆ ಬಲಿಯಾಗಿರುವ ಪುಂಡರ ಗ್ಯಾಂಗ್ ಯೊಂದು ಹಲ್ಲೆ ನಡೆಸಿ ದರೋಡೆ ಮಡಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ನೌಶೀನ್ ಕಾಲೋನಿ ಪ್ರದೇಶದ ಅರ್ಮಾನ್ ಚೌಕ್ ನ 10 ಕ್ರಾಸ್ ಹತ್ತಿರ ಹಾಡಗಲಲ್ಲೆ ಮಾರಾಕಾಸ್ತ್ರ ತೋರಿಸಿ ದರೋಡೆ ಇಳಿಯುವ ಗ್ಯಾಂಗ್ ನಿಂದ ಕೃತ್ಯ ನಡೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.

Contact Your\'s Advertisement; 9902492681

ಪಾಯನ್ ಪ್ರದೇಶದ ಇಕ್ಬಾಲ್ ಮತ್ತು ಗೌರಿ ಎಂಬ ಇಬ್ಬರು ಭಿಕ್ಷೆ ಬೇಡುವ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಹಣಕ್ಕಾಗಿ ಕೃತ್ಯ ನಡೆಸಿದ್ದಾರೆ. ಒಂದು ವರ್ಷದಿಂದ ಇಬ್ಬರು ವೃದ್ಧನಿಗೆ ಹಿಂಸೆ ನೀಡಿ ಹಣಪಡೆಯುತ್ತಾರೆ ಎಂದು ಪೀಡಿತ ವೃದ್ಧ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಕಾಲೋನಿಯ ನಿವಾಸಿಯಾಗಿರುವ ಪೀಡಿತ ವೃದ್ಧ ಭಿಕ್ಷೆ ಬೇಡಿ ಮಕ್ಕಳನ್ನು ಸಾಕುತ್ತಿರುವ ತಿಳಿಸಿದ್ದು, ಚಾಕುವಿನಿಂದ ಕೊಲೆ ಮಾಡುವುದಾಗಿ ಬೆದರಿಸಿ ಲೂಟಿ ಮಾಡುತ್ತಿದ್ದಾರೆ ಎಂದು ಅಳಲು ತೊಡಿಕೊಂಡಿದ್ದಾರೆ.

ಘಟನೆ ಕುರಿತು ಪೊಲೀಸರು ತನಿಖೆ ನಡೆಸಿ ವೃದ್ಧನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here