ಕಲಬುರಿಗಿ: ಜೀವನ್ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆ ಕಲಬುರಗಿ, ಗಿವ್ ಇಂಡಿಯಾ ಸಂಸ್ಥೆ ಮತ್ತು ಸ್ವಸ್ತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ೮೦ ಬಡಕುಟುಂಬಗಳಿಗೆ ಅಹಾರದ ದಿನಸಿ ರೇಷನ್ ಕಿಟ್ಟಗಳನ್ನು ವಿತರಣೆ ಮಾಡಲಾಯಿತು.
ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆಯು ಅತಿ ಸಂಕಷ್ಟದಲ್ಲಿರುವ ೮೦ ಕುಟುಂಬಗಳಿಗೆ ಒಂದು ಕಿಟ್ಟಿಗೆ ೧೨೦೦ ರೂಪಾಯಿ ಮೌಲ್ಯದ ದಿನಸಿ ಕಿಟ್ಗಳನ್ನು ಹಾಗೂ ವೈಯಕ್ತಿಕ ಸ್ವಚ್ಛತೆ ಸಾಮಗ್ರಿಗಳು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶರಣಮ್ಮ ಪ್ರೋಗ್ರಾಮ್ ಮ್ಯಾನೇಜರ್ ಲತಾ. ವಿ ಅಲಬನೂರು. ಆಪ್ತ ಸಮಾಲೋಚಕರು ಹಣಮಂತ ಜಾಧವ ಪ್ರಭುದಾಸ ರಾಠೋಡ ಶಶಿಕಾಂತ್ ಚವಾಣ್ ಇತರರು ಇದ್ದರು.