ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಜಾತಿ ನಿಂದನೆ ಪ್ರಕರಣಗಳು: ಕ್ಯಾಂಪಸ್ ಫ್ರಂಟ್ ಖಂಡನೆ

0
63

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ದಲಿತರೆಂಬ ಕಾರಣಕ್ಕಾಗಿ ಕ್ಷೌರ ಮಾಡಲು ನಿರಾಕರಿಸಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆಯಿಂದಾಗಿ ಇಡೀ ಮಾನವ ಸಮಾಜವೇ ತಗ್ಗಿಸುವಂತಾಗಿದೆ. ಇದನ್ನು ಕ್ಯಾಂಪಸ್ ಫ್ರಂಟ್ ತೀವ್ರವಾಗಿ ಖಂಡಿಸುತ್ತದೆ.

ಜೂನ್ 6 ರಂದು ಹೊಸಹಳ್ಳಿ ಗ್ರಾಮದ ನಿವಾಸಿಗಳಾದ ಸಣ್ಣ ಹನುಮಂತಪ್ಪ ಮತ್ತು ಬಸುರಾಜ್ ಎಂಬುವರ ಮೇಲೆ ಜಾತಿವಾದಿ ವಿಷಜಂತುಗಳ ಗುಂಪೊಂದು ಜಾತಿ ನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ಮಾಡಿದ್ದು ಶೋಚನೀಯ ಮತ್ತು ಅಕ್ಷಮ್ಯ ಅಪರಾಧ. ಜಿಲ್ಲೆಯಲ್ಲಿ ಈ ರೀತಿಯ ಮಾನವ ವಿರೋಧಿ ಕೃತ್ಯಗಳು, ಜಾತಿ ನಿಂದನೆಯ ಘಟನೆಗಳು, ದಲಿತ ವಿರೋಧಿ ದೌರ್ಜನ್ಯಗಳು ಸಾಮಾನ್ಯವಾಗಿಬಿಟ್ಟಿವೆ. ಕ್ಷೌರ ಮಾಡಲು ದಲಿತರೆಂಬ ಕಾರಣಕ್ಕೆ ತಿರಸ್ಕರಿಸಿ, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಈ ಘಟನೆಯು ಜಿಲ್ಲೆಯಲ್ಲಿ ಯಾವ ಮಟ್ಟದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತದೆ ಎಂದು ಪ್ರತ್ಯಕ್ಷವಾಗಿದೆ.

Contact Your\'s Advertisement; 9902492681

ಈ ಹಿಂದೆಯೂ ಸಹ ಇಂತಹ ಹಲವಾರು ಅಹಿತಕರ ಘಟನೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಯಾವುದೇ ಅರೋಗ್ಯಕರ, ಪ್ರಬುದ್ಧ ಸಮಾಜಕ್ಕೆ ಇಂತಹ ದುರ್ಘಟನೆಗಳು ಭೂಷಣ ತೋರಲ್ಲ. ಪ್ರತಿಯೊಬ್ಬ ನಾಗರಿಕರು ಸಹ ಇಂತಹ ನಿಷ್ಕರುಣಾ ಘಟನೆಗಳನ್ನು ಖಂಡಿಸಲೇಬೇಕು. ಈ ಘಟನೆಯ ಕುರಿತಾಗಿ ಈಗಾಗಲೇ ಎಸ್.ಸಿ/ ಎಷ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಮತ್ತು ಕೆಲವರ ಬಂಧನವು ಆಗಿದೆ, ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ.

ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಜೈಲಿಗೆ ತಳ್ಳಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯಲ್ಲಿ ಆಗುತ್ತಿರುವ ಜಾತಿ ತಾರತಮ್ಯದ ದೌರ್ಜನ್ಯಗಳನ್ನು ತಡೆಗಟ್ಟಲು ಜಿಲ್ಲಾ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ಸಮಿತಿಯನ್ನು ರಚಿಸಿ ಇಂತಹ ಅಪರಾಧಗಳಿಗೆ ಕಡಿವಾಣ ಹಾಕಬೇಕೆಂದು ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಇರ್ಫಾನ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here